ಮಕ್ಕಳ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ವಿವಿಧ ಜಿಲ್ಲೆಗಳ ೩೩ ಮಂದಿಯ ಆಯ್ಕೆ
ಅಜೆಕಾರು: ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿಯು ಪ್ರತಿಭಾನ್ವಿತ ಮಕ್ಕಳನ್ನು ಗುರುತಿಸಿ ನೀಡುತ್ತಿರುವ ಎರಡನೇ ವರ್ಷದ ಮಕ್ಕಳ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಮುಂಬಯಿಯ ನಾಲ್ಕು, ಕಾಸರಗೋಡಿನ 9 ಮತ್ತು ವಿವಿಧ ಜಿಲ್ಲೆಗಳ ಒಟ್ಟು ೩೩ ಮಂದಿಯನ್ನು ಆಯ್ಕೆ ಮಾಡಲಾಗಿದೆ ಎಂದು ಸಮಿತಿಯ ರಾಜ್ಯಾಧ್ಯಕ್ಷ ಡಾ.ಶೇಖರ ಅಜೆಕಾರು ಮತ್ತು ಮಕ್ಕಳ ವಿಭಾಗದ ಸಂಚಾಲಕ ಸುನಿಧಿ ಅಜೆಕಾರು ಜಂಟಿಯಾಗಿ ತಿಳಿಸಿದ್ದಾರೆ.
![](https://www.suddi9.com/wp-content/uploads/2022/11/WhatsApp-Image-2022-11-13-at-8.35.11-AM-1-466x700.jpeg)
ಒಂದೂವರೆ ವರ್ಷದಿಂದ ೨೦ ವರ್ಷದವರೆಗಿನ ನೂರ ಎಂಟು ಸಾಧಕರಲ್ಲಿ ೫೦ ಮಂದಿ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದರು. ನಾಲ್ಕು ಸುತ್ತಿನ ಕಠಿಣ ಸ್ಪರ್ಧೆಯಲ್ಲಿ ೩೩ ಮಂದಿಯನ್ನು ಅಯ್ಕೆ ಮಾಡಲಾಗಿದೆ.
ಮಾನ್ಸಿ ವಿ,ಹೆಗ್ಡೆ- ಮುಂಬಯಿ, ರತನ್ ಸಂಜೀವ ಪ್ರಭು-ಮುಂಬಯಿ, ಕಡ್ತಲ ಕೃಪಾ ನಾಯಕ್ ಮುಂಬಯಿ, ಭಾವಿಕಾ ಭಾಸ್ಕರ್ ಮುಂಬಯಿ, ಭಾಗ್ಯಶ್ರೀ ಕುಂಚಿನಡ್ಕ-ಕಾಸರಗೋಡು, ಕ್ಷಿತಿ ರೈ ಧರ್ಮಸ್ಥಳ, ಅರ್ಜುನ್ ಇಟಗಿ-ಕೊಪ್ಪಳ, ವೇದಿಕ್ ಕೌಶಲ್ ಮಡಿಕೇರಿ, ಶ್ರೇಯ ಎ ಪೆರಾಬೆ-ಕಡಬ, ತುಳಸಿ ಹೆಗಡೆ- ಶಿರಸಿ ಉತ್ತರ ಕನ್ನಡ, ಮಧುರ ಎ- ಹಾಸನ, ಸ್ನೇಹಾ ಬಿ.ನೆಟ್ಟಣಿಗೆ ಕಾಸರಗೋಡು, ಶೃಜನ್ ಮೂಲ್ಯ- ಪೆರ್ಡೂರು-ಉಡುಪಿ, ದೀಕ್ಷಾ ಎಂ. ಕಲ್ಮಾಡಿ -ಉಡುಪಿ, ಅವನಿ ಗಂಗಾವತಿ-ಬಳ್ಳಾರಿ, ಹರಿಶ್ರೀ ಎಸ್ ದೇವನಹಳ್ಳಿ ಬೆಂಗಳೂರು ಗ್ರಾಮಾಂತರ, ಲಿಖಿತಾ ಕೆ. ಬೆಂಗಳೂರು, ಶಮಾ ಭಾಗ್ವಾತ್- ಚಿತ್ರದುರ್ಗ, ವಿಶ್ರುತ ಸಾಮಗ-ಉಡುಪಿ, ಮೊಹಮ್ಮದ್ ಫೌಝಾನ್, ಕಟಪಾಡಿ- ಉಡುಪಿ, ರುದ್ರಮನ್ಯು ಕಟೀಲು-ದ.ಕ, ನತಾಶಾ ಎನ್ ತೊಕ್ಕೊಟ್ಟು, ಧನ್ವಿ ರೈ ಕೋಟೆ- ಪಾಣಾಜೆ ಪುತ್ತೂರು, ಲಾವಣ್ಯ ಯು.ರಾವ್- ಕಲ್ಯಾಣಪುರ- ಉಡುಪಿ, ಮಹಾಲಸಾ ಶ್ಯಾನುಭಾಗ್ ಸಾಲಿಗ್ರಾಮ- ಕುಂದಾಪುರ, ಸಮೃದ್ಧಿ ಎಂಕೆ. ಮರೋಳಿ-ದ.ಕ, ಪ್ರವೀಣ್ ಪಿ- ಬೆಂಗಳೂರು, ಶ್ರೀಮಾನ್ಯ ಭಟ್ ಕಡಂದಲೆ- ಮೂಡುಬಿದಿರೆ ದ.ಕ,ಪ್ರಿನ್ಸ್ ಮಹಾಂತ ಗೌಡ ಬನ್ನಟ್ಟಿ- ವಿಜಯಪುರ, ಮೇಧ್ಯಾ ಎಂ.ಕೊಟ್ಟಾರಿ-ಮಂಗಳೂರು, ವೈಷ್ಣವಿ ಸಂತೆಕಟ್ಟೆ ಉಡುಪಿ, ಕಾರುಣ್ಯ ಎಂ.ಶೆಟ್ಟಿ-ಮಂಗಳೂರು
ಮಕ್ಕಳಿಗಾಗಿ ವಿಡಿಯೋಗಳನ್ನು ಮಾಡಿ ಕನ್ನಡದ ಮತ್ತು ಕಲಿಕೆಯ ಜಾಗೃತಿ ಮೂಡಿಸಿದ ವಂದನಾ ರೈ ಅವರಿಗೆ ಶಿಕ್ಷಕರಿಗಾಗಿ
ನೀಡುವ ಗೌರವ ಸಲ್ಲಲಿದೆ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸಹಿತ ಅನೇಕ ಗೌರವಗಳಿಗೆ ಅವರು ಪಾತ್ರರಾಗಿದ್ದಾರೆ. ಪ್ರಧಾನ ಮಂತ್ರಿ ಬಾಲಪುರಸ್ಕಾರ್ ಪುರಸ್ಕೃತ- ಬೆಳದಿಂಗಳ ಕುಟುಂಬದ ಸದಸ್ಯೆ ರೆಮೊನಾ ಇವೆಟ್ ಪಿರೇರಾ ಅವರ ವಿಶೇಷ ಕಾರ್ಯಕ್ರಮ ವಿದ್ದು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಗುವುದು.