ರಾಯಿ ಗ್ರಾಮ ಪಂಚಾಯಿತಿಯಲ್ಲಿ ‘ಕಾನೂನು ಮಾಹಿತಿ ಶಿಬಿರ’
ಬಂಟ್ವಾಳ: ತಾಲ್ಲೂಕಿನ ರಾಯಿ ಗ್ರಾಮ ಪಂಚಾಯಿತಿಯಲ್ಲಿ ವಕೀಲರ ಸಂಘ ಮತ್ತು ಕಾನೂನು ಸೇವೆಗಳ ಸಮಿತಿ ವತಿಯಿಂದ ನ.10ರಂದು ಗುರುವಾರ ನಡೆದ ‘ಕಾನೂನು ಮಾಹಿತಿ ಶಿಬಿರ’ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ವಕೀಲೆ ಚೇತನಾ ಆರ್.ಶೆಟ್ಟಿ ದಂಡೆ ಮಾಹಿತಿ ನೀಡಿದರು. ಗ್ರಾಮ ಪಂಚಾಯಿತಿ ಸದಸ್ಯರಾದ ಶೋಭ ಎನ್.ಚಿಂಗಲಚ್ಚಿಲ್, ಸಂತೋಷ್ ಕುಮಾರ್ ಬೆಟ್ಟು, ದಿನೇಶ ಶೆಟ್ಟಿ, ಉಷಾ ಸಂತೋಷ್, ಮಾಜಿ ಸದಸ್ಯರಾದ ಹರೀಶ ಆಚಾರ್ಯ, ಪುಷ್ಪಲತಾ, ಪಿಡಿಒ ಮಧು ಟಿ.ಎಲ್. ಮತ್ತಿತರರು ಇದ್ದರು.