ಬಿ.ಸಿ.ರೋಡು: ಜೆಸಿಐ ಘಟಕದಿಂದ ಶತ ಮೌನ ಸಾಧಕರಿಗೆ ಸನ್ಮಾನ
ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡು ಸ್ಪಶಾ ಸಭಾಂಗಣದಲ್ಲಿ ಜೆಸಿಐ ಘಟಕ ವತಿಯಿಂದ ಭಾನುವಾರ ನಡೆದ ‘ಮೌನ ಸಾಧಕರಿಗೆ ಸನ್ಮಾನ’ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾದಕರನ್ನು ಅಭಿನಂದಿಸಲಾಯಿತು.
ಬಂಟ್ವಾಳ ತಾಲ್ಲೂಕಿನ ವಿವಿಧ ಕ್ಷೇತ್ರಗಳಲ್ಲಿ ಸದ್ದಿಲ್ಲದೆ ದುಡಿಯುತ್ತಿರುವ ೧೦೦ ಮಂದಿ ಮೌನ ಸಾಧಕರಿಗೆ ಬಂಟ್ವಾಳ ಜೆಸಿಐ ಘಟಕ ವತಿಯಿಂದ ಭಾನುವಾರ ಬಿ.ಸಿ.ರೋಡು ಸ್ಪಶಾ ಸಭಾಂಗಣದಲ್ಲಿ ಸನ್ಮಾನಿಸಲಾಯಿತು. ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.
ಮಾಜಿ ಸಚಿವ ಬಿ.ರಮಾನಾಥ ರೈ, ಪ್ರಮುಖರಾದ ಭರತ್ ಕುಮಾರ್ ಶೆಟ್ಟಿ, ರಾಜಶೇಖರ ರೈ ಕಳ್ಳಿಗೆ, ಸದಾಶಿವ ಡಿ.ತುಂಬೆ, ಸೌಮ್ಯ ರಾಕೇಶ್, ದೀಪಕ್ ಗಂಗೂಲಿ, ರಶ್ಮಿ ಶೆಟ್ಟಿ, ವಿದ್ಯಾ ಉಮೇಶ್, ಜಯರಾಜ್ ಮತ್ತಿತರರು ಇದ್ದರು. ಜೆಸಿಐ ಘಟಕ ಅಧ್ಯಕ್ಷ ರೋಶನ್ ರೈ ಸ್ವಾಗತಿಸಿ, ಮಾಜಿ ಅಧ್ಯಕ್ಷ ಉಮೇಶ ಮೂಲ್ಯ ವಂದಿಸಿದರು. ಸಂತೋಷ್ ಜೈನ್ ಮತ್ತು ರವೀನಾ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.