ಮೂಡುಬಿದಿರೆ: ಇಲ್ಲಿನ ಮೂಡುಕೊಣಾಜೆ ನಿವಾಸಿ ರವಿ ಪೂಜಾರಿ (55) ಎಂಬವರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದು, ಸೋಮವಾರ ಸಾಯಂಕಾಲ ಬೆಳಕಿಗೆ ಬಂದಿದೆ.

ಮೂಡುಕೊಣಾಜೆಯ ಕುಕ್ಕುದಕಟ್ಟೆ ನಿವಾಸಿ ರವಿ ಪೂಜಾರಿಯವರು ಹಲವು ವರ್ಷಗಳಿಂದ ಚಾಲಕರಾಗಿ ಕೆಲಸ ನಿರ್ವಹಿಸಿದ್ದು, ಅನಾರೋಗ್ಯದ ಕಾರಣ ಕೆಲಸವನ್ನು ಬಿಟ್ಟಿದ್ದರು. ಅನಾರೋಗ್ಯ ಕಾರಣದಿಂದ ಅವರು ತಮ್ಮ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ. ಅವರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

By Suddi9

Leave a Reply

Your email address will not be published. Required fields are marked *