ಸಿವಿಲ್ ಡಿಪ್ಲೊಮಾ ಎಂಜಿನಿಯರಿಂಗ್ ರಾಜ್ಯಕ್ಕೆ ಪ್ರಥಮ ಬಂದ 70ರ ವೃದ್ಧ
ಕಾರವಾರ: ಸಿವಿಲ್ ಡಿಪ್ಲೊಮಾ ಎಂಜಿನಿಯರಿಂಗ್ (Civil Diploma Engineering) ವಿಭಾಗದ ಪರೀಕ್ಷೆಯಲ್ಲಿ (Exam) ಶಿರಸಿಯ ಆರ್.ಎನ್.ಶೆಟ್ಟಿ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಯಾಗಿದ್ದ 70ರ ಹರೆಯದ ನಾರಾಯಣ ಎಸ್. ಭಟ್ಟ ರಾಜ್ಯಕ್ಕೆ (Karnataka) ಪ್ರಥಮ ಸ್ಥಾನ ಪಡೆದಿದ್ದಾರೆ.

2019-20 ರಿಂದ 2021-22ನೇ ಸಾಲಿನ ಡಿಪ್ಲೊಮಾ ಪರೀಕ್ಷೆಯ ಫಲಿತಾಂಶವನ್ನು ರಾಜ್ಯ ತಾಂತ್ರಿಕ ಪರೀಕ್ಷಾ ಮಂಡಳಿ ಪ್ರಕಟಿಸಿದ್ದು ಶೇ.94 ರಷ್ಟು ಅಂಕ ಗಳಿಕೆಯೊಂದಿಗೆ ಸಿವಿಲ್ ಡಿಪ್ಲೊಮಾ ಪರೀಕ್ಷೆಯಲ್ಲಿ ರಾಜ್ಯದಲ್ಲೇ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿ ಎಂಬ ಹಿರಿಮೆಗೆ ಇಳಿ ವಯಸ್ಸಿನ ವ್ಯಕ್ತಿ ಪಾತ್ರರಾಗಿದ್ದಾರೆ.
ಉತ್ತರ ಕನ್ನಡ (Uttara Kannada) ಜಿಲ್ಲೆಯ ಶಿರಸಿ ತಾಲೂಕಿನ ಸುಗಾವಿ ಮೂಲದ ನಾರಾಯಣ ಅವರು ಸದ್ಯ ಶಿರಸಿಯಲ್ಲಿ ನೆಲೆಸಿದ್ದಾರೆ. ಇವರು 1973ರಲ್ಲೇ ಮೆಕ್ಯಾನಿಕಲ್ ಡಿಪ್ಲೊಮಾ ಎಂಜಿನಿಯರಿಂಗ್ ಪದವಿ ಪಡೆದಿದ್ದರು. ಬಳಿಕ ಕಾರವಾರ, ಗುಜರಾತ್ ಸೇರಿದಂತೆ ವಿವಿಧೆಡೆ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡಿದ್ದರು.
2013ರಲ್ಲಿ ನಿವೃತ್ತಿ ಪಡೆದು ಶಿರಸಿಗೆ ಮರಳಿದ್ದ ಅವರು ಪುನಃ ಡಿಪ್ಲೊಮಾ ಕಲಿಕೆಗೆ ಆಸಕ್ತಿ ತೋರಿದ್ದರು. ಅವರಿಗೆ ಪ್ರವೇಶಾತಿ ನೀಡಲು ತಾಂತ್ರಿಕ ಅಡಚಣೆ ಎದುರಾಗಿತ್ತು. ಅಂತಿಮವಾಗಿ 2019ರಲ್ಲಿ ಆರ್.ಎನ್.ಶೆಟ್ಟಿ ಪಾಲಿಟೆಕ್ನಿಕ್ ಕಾಲೇಜಿನ ಸಿವಿಲ್ ಡಿಪ್ಲೊಮಾ ವಿಭಾಗಕ್ಕೆ ಪ್ರವೇಶ ಪಡೆದರು.