ಬಾರ್ ಮ್ಯಾನೇಜರ್ ಗೆ ಸೋಡಾ ಬಾಟಲಿಯಿಂದ ಹಲ್ಲೆ, ಕೊಲೆ ಬೆದರಿಕೆ
ಬಡಗಬೆಳ್ಳೂರು: ಟೇಬಲ್ ವಿಚಾರಕ್ಕೆ ಬಾರೊಂದರಲ್ಲಿ ಕೆಲಸ ಮಾಡುವ ಮ್ಯಾನೇಜರ್ ಓರ್ವರಿಗೆ ಮೂವರು ಸೋಡಾ ಬಾಟಲಿಯಿಂದ ಹಲ್ಲೆ ನಡೆಸಿ ಬಳಿಕ ಕೊಲೆ ಬೆದರಿಕೆ ಹಾಕಿದ ಘಟನೆ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಬಡಗಬೆಳ್ಳೂರಿನಲ್ಲಿ ಅ.28ರಂದು ಶುಕ್ರವಾರ ರಾತ್ರಿ ವೇಳೆ ನಡೆದಿದೆ.

ಆರೋಪಿಗಳಾದ ತೇಜಾಕ್ಷ, ಹರೀಶ್, ವಿಜೇತ್ ಎಂಬವರು ಹಲ್ಲೆ ನಡೆಸಿ ದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಬಡಗಬೆಳ್ಳೂರು ಗ್ರಾಮದ ಬಡಗಬೆಳ್ಳೂರು ದೀಪಕ್ ಬಾರ್ ಮ್ಯಾನೇಜರ್ ರತ್ನಾಕರ್ ಕೋಟ್ಯಾನ್ ಅವರ ಮೇಲೆ ಹಲ್ಲೆ ನಡೆಸಿದ ಆರೋಪಿಗಳು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ಗಾಯಗೊಂಡ ರತ್ನಾಕರ್ ಅವರು ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೂವರು ಆರೋಪಿಗಳು ದೀಪಕ್ ಬಾರ್ ನಿತ್ಯ ಗಿರಾಕಿಗಳು. ಅವರು ನಿತ್ಯ ಬಾರ್ ಹೊರಗಡೆ ಟೇಬಲ್ ಹಾಕಿ ಮಧ್ಯ ಸೇವನೆ ಮಾಡುತ್ತಿದ್ದರು.
ಆದರೆ ಹೊರಗಡೆ ಟೇಬಲ್ ಹಾಕಬಾರದು ಎಂದು ಬಾರ್ ನ ಮಾಲಕ ಮ್ಯಾನೇಜರ್ ಗೆ ತಿಳಿಸಿದ್ದರಿಂದ ಮ್ಯಾನೇಜರ್ ಟೇಬಲ್ ತೆಗೆದಿದ್ದರು. ಆದರೆ ಇದಕ್ಕೆ ಕಾರಣ ಮ್ಯಾನೇಜರ್ ಎಂದು ತಪ್ಪಾಗಿ ಅರ್ಥೈಸಿ ದ ಗಿರಾಕಿಗಳು ಹಲ್ಲೆ ನಡೆಸಿದ್ದ ಲ್ಲದೆ ಕೊಲೆ ಬೆದರಿಕೆ ಹಾಕಿದ್ದಾರೆ.