ಬಂಟ್ವಾಳ: ಪುದು ಗ್ರಾಮದ ಗೋವಿನತೋಟ ರಾಧಾ ಸುರಭಿ ಗೋಶಾಲೆಯಲ್ಲಿ ನ.03ರವರೆಗೆ ನಿರಂತರ ನಡೆಯಲಿರುವ ‘ಗೋ ನವರಾತ್ರಿ ಉತ್ಸವ’ ಕ್ಕೆ ಗ್ರಾಮಸ್ಥರಿಂದ ಹೊರೆ ಕಾಣಿಕೆ ಸಮರ್ಪಿಸಲಾಯಿತು.

ಫರಂಗೀಪೇಟೆ ಸೇವಾಂಜಲಿ ಸಭಾಂಗಣದಿಂದ ಗೋವಿನತೋಟದ ವರೆಗೆ ಹಸಿರು ಹೊರೆಕಾಣಿಕೆಯನ್ನು ಮೆರವಣಿಗೆಯಲ್ಲಿ ಸಾಗಿಸಲಾಯಿತು.
ಗೋ ನವರಾತ್ರಿ ಉತ್ಸವದ ಪ್ರತಿನಿತ್ಯ ಅನ್ನದಾನ, ಉಪಹಾರದ ವ್ಯವಸ್ಥೆ ಮಾಡಲಾಗಿದ್ದು, ಅವಶ್ಯಕ ಜಿನಸಿ ಪದಾರ್ಥಗಳು, ತೆಂಗಿನಕಾಯಿ, ಬಾಳೆಕಾಯಿ, ಎಳನೀರು, ಗೋವುಗಳಿಗೆ ಮೇವುಗಳನ್ನೂ ಹೊರೆಕಾಣಿಕೆಯಲ್ಲಿ ಸಮರ್ಪಿಸಲಾಯಿತು.
ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜಾ ರವರು ಮೆರವಣಿಗೆಗೆ ಚಾಲನೆ ನೀಡಿದರು ಹಿರಿಯರಾದ ಪ್ರಕಾಶ್ ಮಡಿವಾಳ, ಕಾರ್ಯಕ್ರಮ ಸಂಯೋಜಕರಾದ ತೇವು ತಾರಾನಾಥ ಕೊಟ್ಟಾರಿ, ಪ್ರಮುಖರಾದ ಪದ್ಮನಾಭ ಶೆಟ್ಟಿ ಪುಂಚಮೆ, ಎ.ಕೆ.ಗಿರೀಶ್ ಶೆಟ್ಟಿ, ದಿನೇಶ್ ಶೆಟ್ಟಿ ಕೊಟ್ಟಿಂಜ, ಮನೋಜ್ ಆಚಾರ್ಯ ನಾಣ್ಯ, ನವೀನ್ ಕುಲಾಲ್, ಸುಕೇಶ್ ಶೆಟ್ಟಿ, ಯಾದವ ಕೊಡಂಗೆ, ಕಿಶೋರ್ ಕುಮ್ಡೇಲು, ಯೋಗೇಶ್ ಕೋಟ್ಯಾನ್, ರಾಜೇಶ್ ಕಬೇಲ, ಸುದೀರ್ ಮಾರ್ಲ, ಸಚಿನ್, ಮಧುರಾಜ್ ಶೆಟ್ಟಿ, ಅಶೋಕ ಮತ್ತಿತರರು ಉಪಸ್ಥಿತರಿದ್ದರು.
ಗೋ ಉತ್ಪನ್ನಗಳ ತಯಾರಿಕೆಯ ಮಾಹಿತಿ ಕಾರ್ಯಾಗಾರ ಗೋಕಥೆ, ಸುರಭಿ ಜಪ ಯಜ್ಞ, ಹನುಮಾನ್ ಚಾಲೀಸ್, ದಾಂಡಿಯಾ ನೃತ್ಯ ಗಳಲ್ಲಿ ಸ್ಥಳೀಯರ ಸಹಿತ ಗೋಪ್ರೇಮಿಗಳು ಪಾಲ್ಗೊಳ್ಳುತ್ತಿದ್ದಾರೆ
