ಕೊಯಿಲ: ಗೂಡ್ಸ್ ಟೆಂಪೋ ಡಿಕ್ಕಿ, ಬೈಕ್ ಸವಾರ ಸ್ಥಳದಲ್ಲೇ ಸಾವು
ಬಂಟ್ವಾಳ: ಕೊಯಿಲ ಪೇಟೆ ಸಮೀಪದ ಕುದ್ಮಾಣಿ ಕಿರು ಸೇತುವೆ ಮೇಲೆ ಗೂಡ್ಸ್ ಟೆಂಪೋ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಅ.25ರಂದು ಮಂಗಳವಾರ ಮಧ್ಯಾಹ್ನ ನಡೆದಿದೆ. ಮೃತರನ್ನು ತೆಂಕ ಮಿಜಾರು ಗ್ರಾಮದ ನೀರಪಲ್ಕೆ ಬರ್ಕೆ ನಿವಾಸಿ ಗುಣಪಾಲ ಸೇಮಿತ ಇವರ ಪುತ್ರ ದಿನೇಶ ಸೇಮಿತ(೩೩) ಎಂದು ಗುರುತಿಸಲಾಗಿದೆ.
ಇವರು ಮೂಡುಬಿದ್ರೆ ಕಡೆಯಿಂದ ಬಂಟ್ವಾಳ ಕಡೆಗೆ ಬೈಕಿನಲ್ಲಿ ಹೋಗುತ್ತಿದ್ದ ವೇಳೆ, ಬಿ.ಸಿ.ರೋಡಿನಿಂದ ಮೂಡುಬಿದ್ರೆಗೆ ಹೋಗುತ್ತಿದ್ದ ಬೀಡಿ ಸಂಸ್ಥೆಯೊಂದರ ಗೂಡ್ಸ್ ಟೆಂಪೋ ಢಿಕ್ಕಿಯಾಗಿದೆ. ಇದೇ ವೇಳೆ ಬೈಕ್ ಸವಾರನ ತಲೆ ರಸ್ತೆಗೆ ಬಡಿದು ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಮೆಲ್ಕಾರ್ ಸಂಚಾರಿ ಠಾಣೆ ಪೊಲೀಸರು ಬಂದು ಸ್ಥಳ ಪರಿಶೀಲನೆ ನಡೆಸಿದ್ದು, ಟೆಂಪೋ ಚಾಲಕ ಉಪ್ಪಿನಂಗಡಿ ನಿವಾಸಿ ಗಣೇಶ ಅವರನ್ನು ವಿಚಾರಣೆ ನಡೆಸಿದರು ಎಂದು ತಿಳಿದು ಬಂದಿದೆ.