ಉಚ್ಚಿಲ : ಏಕಾಏಕಿ ಮುಚ್ಚಿದ ಹೆದ್ದಾರಿ,ಗಲಿಬಿಲಿಗೊಂಡ ವಾಹನ ಸವಾರರು
ಉಚ್ಚಿಲ: ಕಾಮಗಾರಿಯ ಹೆಸರಲ್ಲಿ ಹೆದ್ದಾರಿಯನ್ನು ಏಕಾಏಕಿ ಮುಚ್ಚಿದ ಪರಿಣಾಮ ವಾಹನ ಸವಾರರು ಗಲಿಬಿಲಿಕೊಂಡು ರಾತ್ರಿ ಹೊತ್ತು ಸರಣಿ ಅಪಘಾತ ನಡೆದ ಘಟನೆ ಉಚ್ಚಿಲದಲ್ಲಿ ನಡೆದಿದೆ.
ಪೊಲೀಸ್ ಇಲಾಖೆ ಸಹಿತ ಸಾರ್ವಜನಿಕರಿಗೆ ಯಾವುದೇ ಮಾಹಿತಿ ನೀಡಿದೆ ಕಾಮಗಾರಿ ಹೆಸರಲ್ಲಿ ಅಪಾಯಕಾರಿಯಾಗಿ ಹೆದ್ದಾರಿ ಮುಚ್ಚಿದ್ದು ಒಂದು ಕಡೆಯಾದರೆ, ಮತ್ತೊಂದು ಕಡೆ ಹೆದ್ದಾರಿ ಡಿವೈಡರ್ ಗಳಲ್ಲಿ ದಾರಿದೀಪಕ್ಕಾಗಿ ಎಲ್ಲೆಡೆ ಟವರ್‍ಗಳನ್ನು ನಿರ್ಮಿಸಿ ಅದೆಷ್ಟೋ ಕಾಲವಾದರೂ ದೀಪ ಅಳವಡಿಸದಿರುವುದರಿಂದ ಹೆದ್ದಾರಿ ಎಲ್ಲೆಡೆ ಕಗ್ಗತ್ತಲು, ಅಪಘಾತಗಳಿಗೆ ಇದೂ ಒಂದು ಕಾರಣ ವಾಗುತ್ತಿದೆ ಎಂಬ ಆರೋಪ ಸಾರ್ವಜನಿಕರದ್ದಾಗಿದೆ.
ಸ್ಕಾರ್ಪಿಯೋ, ಎರ್ಟಿಗಾ ಸಹಿತ ಕೆಲವು ದ್ವಿಚಕ್ರ ವಾಹನಗಳ ಸರಣಿ ಅಪಘಾತ ಈ ಪ್ರದೇಶದಲ್ಲಿ ನಡೆದಿದ್ದು ಬಹಳಷ್ಟು ಮಂದಿ ಗಾಯಗೊಂಡಿದ್ದಾರೆ. ಇನ್ನು ಅದೆಷ್ಟು ಅಪಘಾತಗಳು ಇಲ್ಲಿ ನಡೆಯಲಿದೆಯೋ ಎಂಬ ಆತಂಕ ವ್ಯಕ್ತ ಪಡಿಸಿದ ಸಾರ್ವಜನಿಕರು ಹೆದ್ದಾರಿ ಇಲಾಖೆ ವಿರುದ್ಧ ಕಿಡಿಕಾರಿದ್ದಾರೆ. ಸ್ಥಳಕ್ಕೆ ಕಾಪು ಸರ್ಕಲ್ ಇನ್ಸ್ ಪೆಕ್ಟರ್ ಪೂವಯ್ಯ ಸಹಿತ ಪಡುಬಿದ್ರಿ, ಕಾಪು ಸಬ್ ಇನ್ಸ್ ಪೆಕ್ಟರ್ ಗಳು ಹಾಗೂ ಸಿಬ್ಬಂದಿಗಳು ಸುಗಮ ಸಂಚಾರ ವ್ಯವಸ್ಥೆಯ ಬಗ್ಗೆ ಗಮನ ಹರಿಸಿ ಸ್ಥಳದಲ್ಲಿದ್ದರು.