“ಮೋಸ್ಟ್ ಬೋ ಸ್ಟಪ್ ಸ್ಟ್ರೇಕ್ಸ್ ಇನ್ ಒನ್ ಮಿನಿಟ್”ನಲ್ಲಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ದಾಖಲೆ ಮಾಡಿದ ಅಪ್ರತಿಮ ಸಾಧಕ ಮಾ. ವಿಘ್ನೇಶ್
ಕಾರ್ಕಳ:”ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿ ನೂತನ ದಾಖಲೆ ಮಾಡಿದ ಅಪ್ರತಿಮ ಸಾಧಕ ಮಾ ವಿಘ್ನೇಶ್ ಇವರು “ಮೋಸ್ಟ್ ಬೋ ಸ್ಟಫ್ ಸ್ಟ್ರೇಕ್ಸ್ ಇನ್ ಒನ್ ಮಿನಿಟ್” ಎಂಬ ನೂತನ ವಿಶ್ವ ದಾಖಲೆಯನ್ನು ನಿರ್ಮಿಸಿರುತ್ತಾರೆ.
ಇವರು ಕಾರ್ಕಳದ ಯೋಗ ಗುರುಗಳಾದ ಶ್ರೀ ಕೆ. ಅಶೋಕ ಕುಮಾರ ಮತ್ತು ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ರೇಣುಕಾ ಅವರ ಮಗ. ಇವರು ಪ್ರಸ್ತುತ ಪ್ರಥಮ ವರ್ಷದ ಇಂಜಿನಿಯರಿಂಗ್ ವ್ಯಾಸಂಗವನ್ನು ನಿಟ್ಟೆ ಕಾಲೇಜಿನಲ್ಲಿ ಮಾಡುತ್ತಿದ್ದಾರೆ. ಹಿಂದುಸ್ಥಾನಿ ಸಂಗೀತವನ್ನು ಅಭ್ಯಸಿಸಿ ಕೊಳಲು ವಾದನವನ್ನೂ ಮಾಡುತ್ತಿದ್ದಾರೆ.