ಕಂಬಳ ಕ್ಷೇತ್ರದ ಹಿರಿಯ ಯಜಮಾನ ಇರುವೈಲು ಪಾಣಿಲ ಬಾಡ ಪೂಜಾರಿ ನಿಧನ
ಮೂಡುಬಿದಿರೆ: ಕಂಬಳ ಕ್ಷೇತ್ರದ ಹಿರಿಯ ಯಜಮಾನ ಇರುವೈಲು ಪಾಣಿಲ ಬಾಡ ಪೂಜಾರಿ(90ವ) ಅವರು ಅಲ್ಪ ಕಾಲದ ಅನಾರೋಗ್ಯದಿಂದ ಸೋಮವಾರ ರಾತ್ರಿ ಸ್ವಗೃಹದಲ್ಲಿ ನಿಧನ ಹೊಂದಿದರು.

ಕೃಷಿಕರಾಗಿದ್ದ ಅವರು ಕಳೆದ 23 ವರ್ಷಗಳಿಂದ ಕಂಬಳದಲ್ಲಿ ಕೋಣಗಳನ್ನು ( ತಾಟೆ ಮತ್ತು ಬೊಟ್ಟಿಮಾರ್ ) ಕಟ್ಟಿ ಬೆಳೆಸುವ ಮೂಲಕ ಹಲವು ಬಹುಮಾನಗಳನ್ನು ಗಳಿಸಿಕೊಂಡಿದ್ದರು.

ಕಂಬಳ ಕ್ಷೇತ್ರದಲ್ಲಿ ವಿಶ್ವ ಪ್ರಸಿದ್ಧಿಯನ್ನು ಪಡೆದಿರುವ ಓಟಗಾರ ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡ ಅವರು ಈ ಯಜಮಾನಿಕೆಯ ಕೋಣಗಳನ್ನು ಓಡಿಸಿ ಗಮನ ಸೆಳೆದಿದ್ದಾರೆ.
ಪತ್ನಿ ದೇವಕಿ, ಪಾಣಿಲ ಸತೀಶ್ಚಂದ್ರ ಸಾಲ್ಯಾನ್ ಸಹಿತ ಆರು ಮಂದಿ ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.