ಸಿದ್ಧಕಟ್ಟೆ: ೪ನೇ ವರ್ಷದ ಶಾರದೋತ್ಸವ ಬೆಳ್ಳಿ ವೀಣೆ ಸಮರ್ಪಣೆ
ಬಂಟ್ವಾಳ ತಾಲ್ಲೂಕಿನ ಸಿದ್ಧಕಟ್ಟೆ ಕೇಂದ್ರ ಮೈದಾನದಲ್ಲಿ ಭಾನುವಾರ ಆರಂಭಗೊಂಡ ೪ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವದಲ್ಲಿ ಶಾರದೆ ವಿಗ್ರಹಕ್ಕೆ ಬೆಳ್ಳಿ ವೀಣೆ ಸಮರ್ಪಿಸಲಾಯಿತು.
ಸಿದ್ಧಕಟ್ಟೆ ಸಾರ್ವಜನಿಕ ಶ್ರೀ ಶಾರದೋತ್ಸವ ಆಚರಣಾ ಸಮಿತಿ ವತಿಯಿಂದ ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಭಾನುವಾರ ಆರಂಭಗೊಂಡ ೪ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವದಲ್ಲಿ ಶಾರದೆ ವಿಗ್ರಹಕ್ಕೆ ಬೆಳ್ಳಿ ವೀಣೆ ಸಮರ್ಪಿಸಲಾಯಿತು. ಆರಂಭದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಮಂದಿರದಿಂದ ಶಾರದೆ ವಿಗ್ರಹ ಮೆರವಣಿಗೆ ಮೂಲಕ ತರಲಾಯಿತು.
ಮೆರವಣಿಗೆಗೆ ಸೀತಾರಾಮ ಶಾಂತಿ ಚಾಲನೆ ನೀಡಿದರು. ಸಮಿತಿ ಅಧ್ಯಕ್ಷ ಕೆ.ರಮೇಶ ನಾಯಕ್ ರಾಯಿ, ಗೌರವಾಧ್ಯಕ್ಷ ಮಾಜಿ ಸಚಿವ ಬಿ.ರಮಾನಾಥ ರೈ, ಸಂಚಾಲಕ ಜಗದೀಶ ಕೊಯಿಲ, ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ದಿನೇಶ ಸುಂದರ ಶಾಂತಿ, ಮಾಜಿ ಅಧ್ಯಕ್ಷ ಗೋಪಾಲ ಬಂಗೇರ, ಪ್ರಮುಖರಾದ ಬೇಬಿ ಕುಂದರ್, ಕೆ.ಮಾಯಿಲಪ್ಪ ಸಾಲ್ಯಾನ್, ಸೀತಾರಾಮ ಶೆಟ್ಟಿ, ಶಿವಾನಂದ ರೈ, ದೇವಪ್ಪ ಕರ್ಕೇರ, ರಮೇಶ ಮಂಜಿಲ, ದಿನೇಶ ಶೆಟ್ಟಿಗಾರ್, ಅಶೋಕ ಆಚಾರ್ಯ ಮತ್ತಿತರರು ಇದ್ದರು.