ಬಂಟ್ವಾಳ: ಅಶಕ್ತರ ನೆರವಿಗೆ ಸ್ಪಂದನೆ ತುಡಿತ, ಪ್ರೇತ ವೇಷಧಾರಿಯಾದ ದೇವದಾಸ್..!
ಬಂಟ್ವಾಳ ತಾಲ್ಲೂಕಿನ ಸರಪಾಡಿ ಗ್ರಾಮದ ನೀರೊಲ್ಬೆ ನಿವಾಸಿ ದೇವದಾಸ್ ಪ್ರೇತ ವೇಷಧಾರಿಯಾಗಿ ಗಮನ ಸೆಳೆದಿದ್ದಾರೆ.

ಅನಾರೋಗ್ಯ ಪೀಡಿತ ಮಕ್ಕಳು ಮತ್ತು ಬಡ ಯುವತಿಯರ ಮದುವೆಗೆ ರವಿ ಕಟಪಾಡಿ ಮಾದರಿಯಲ್ಲಿ ನೆರವು ನೀಡುವುದಕ್ಕಾಗಿ ನವರಾತ್ರಿ ವೇಳೆ ಪ್ರೇತ ವೇಷಧಾರಿಯಾಗಿ ಸರಪಾಡಿ ಗ್ರಾಮದ ನೀರೊಲ್ಬೆ ನಿವಾಸಿ ದೇವದಾಸ್ ನಾಯ್ಕ್ ಗಮನ ಸೆಳೆದಿದ್ದಾರೆ.
ಈ ಹಿಂದೆ ೨ ಬಾರಿ ವೇಷ ಹಾಕಿ ಸಂಗ್ರಹಗೊಂಡ ಹಣ ಅಶಕ್ತರಿಗೆ ನೀಡಿದ್ದು, ಕಳೆದ ಎರಡು ವರ್ಷ ಕೊರೊನಾ ನೆಪದಲ್ಲಿ ವೇಷ ಹಾಕಲು ಸಾಧ್ಯವಾಗಿಲ್ಲ. ಈ ಬಾರಿ ಹೆಚ್ಚಿನ ಮೊತ್ತ ಸಂಗ್ರಹಿಸಲು ಏಳು ದಿನಗಳ ಕಾಲ ವೇಷ ಹಾಕಿ ಸುತ್ತಾಟ ನಡೆಸುವುದಾಗಿ ಅವರು ತಿಳಿಸಿದ್ದಾರೆ. ಇಲ್ಲಿನ ಸರಪಾಡಿ ಬಡ ಕುಟುಂಬದ ಒಂದೇ ಮನೆಯಲ್ಲಿ ಇಬ್ಬರು ಮಕ್ಕಳು ಕಿಡ್ನಿ ಸಂಬಂಧಿ ಖಾಯಿಲೆಯಿಮದ ಬಳಲುತ್ತಿದ್ದು, ಅವರ ಚಿಕಿತ್ಸೆಗೆ ನೆರವು ನೀಡುವುದಾಗಿ ಅವರು ತಿಳಿಸಿದ್ದಾರೆ.