ಯಕ್ಷಕಲಾ ಪೊಳಲಿ ವತಿಯಿಂದ ‘ಪೊಳಲಿ ಯಕೋತ್ಸವ
ಪೊಳಲಿ:‘ಯಕ್ಷಕಲಾ ಪೊಳಲಿ’ ಸಂಸ್ಥೆಯ 27ನೇ ವರ್ಧಂತ್ಯುತ್ಸವ ‘ಪೊಳಲಿ ಯಕೋತ್ಸವ-2022’ ಎಂಬ ಶಿರೋನಾಮೆಯಲ್ಲಿ ಅ.01ರಂದು ಸಂಜೆ 6ರಿಂದ ಮರುದಿನ ಬೆಳಗ್ಗೆ 6ರ ವರೆಗೆ ಶ್ರೀ ಕ್ಷೇತ್ರ ಪೊಳಲಿಯಲ್ಲಿ ನೆರವೇರಲಿದೆ.
ಯಕ್ಷಗಾನ ಕ್ಷೇತ್ರದಲ್ಲಿ ಸುದೀರ್ಘ ಕಲಾ ಸೇವೆ ಮಾಡಿರುವ ಸಂಸ್ಥೆಯು 26 ವರ್ಷಗಳಲ್ಲಿ 26 ಯಕ್ಷಗಾನ ಬಯಲಾಟ, ಗಾನವೈಭವ, ತಾಳಮದ್ದಳೆ, ಕೀರ್ತಿಶೇಷ ಕಲಾವಿದರ ಸಂಸ್ಕರಣೆ, ಸಾಧಕರಿಗೆ ಗೌರವಾರ್ಪಣೆ, ಯಕ್ಷಗಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ 150 ಕಲಾವಿದರಿಗೆ ಸಮ್ಮಾನ ಮೊದಲಾದ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬಂದಿದೆ.
27ನೇ ವರ್ಧಂತ್ಯುತ್ಸವದಲ್ಲಿ ಕೀರ್ತಿಶೇಷ ಪ್ರಸಾದ್ ಭಟ್, ಮುಳಿಯಾಳ ಭೀಮ ಭಟ್, ಬೆಳ್ಳಾರೆ ವಿಶ್ವನಾಥ ರೈ, ತೋಡಿಕಾನ ವಿಶ್ವನಾಥ ಗೌಡ ಅವರ ಸಂಸ್ಕರಣೆ, ಅಂಬುರಾಹ ಯಕ್ಷ ಸದನ ಪ್ರತಿಷ್ಠಾನ ಬೊಟ್ಟಿಕೆರೆ ಅವರಿಗೆ ಗೌರವಾರ್ಪಣೆ ಹಾಗೂ ಡಾ| ಸತ್ಯನಾರಾಯಣ ಪುಣಿಚಿತ್ತಾಯ, ಕರುಣಾಕರ ಶೆಟ್ಟಿಗಾರ ಕಾಶಿಪಟ್ಟ ಪೊಳಲಿ ದಿವಾಕರ ಆಚಾರ್ಯ, ಸುಬ್ರಹ್ಮಣ್ಯ ಶಾಸ್ತ್ರ ಮಣಿಮುಂಡ, ಲಕ್ಷ್ಮಣ ಕೋಟ್ಯಾನ್ ಪೆರಾರ, ವಿದ್ಯಾ ಕೋಳ್ಳೂರು ಅವರಿಗೆ ಸಮಾನ ಕಾರ್ಯಕ್ರಮ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮವಾಗಿ ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ‘ದಕ್ಷಯಜ್ಞ ಮಾನಿಷಾದ ಪ್ರದರ್ಶನವಾಗಲಿದೆ ಎಂದು ಸಂಸ್ಥೆಯ ಸಂಚಾಲಕ ವೆಂಕಟೇಶ ನಾವಡ ಪೊಳಲಿ, ಸಂಸ್ಥಾಪಕ ಪೊಳಲಿ, ಸಂಯೋಜಕರಾದ ಬಿ. ಜನಾರ್ದನ ಅಮ್ಮುಂಜೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.