ಕೇರಳದಲ್ಲಿ ಹಿಂಸಾಚಾರಕ್ಕೆ ತಿರುಗಿದ ಪಿಎಫ್‌ಐ ಪ್ರತಿಭಟನೆ – ಬಸ್, ವಾಹನಗಳ ಮೇಲೆ ಕಲ್ಲು ತೂರಾಟ – 100 ಕ್ಕೂ ಅಧಿಕ ಮಂದಿ ಪೊಲೀಸ್ ವಶಕ್ಕೆ
ಕೇರಳ: NIA ದಾಳಿ ಖಂಡಿಸಿ ಕೇರಳದದಲ್ಲಿ ಪಿಎಫ್‌ಐ ಹರತಳಕ್ಕೆ ಇಂದು ಕರೆ ನೀಡಿದ್ದು,ಕೊಲ್ಲಂನಲ್ಲಿ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿದೆ. ಸರ್ಕಾರಿ ಬಸ್ ಹಾಗೂ ಇತರ ವಾಹನಗಳ ಮೇಲೆ PFI ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ್ದಾರೆ. ಕೇರಳದಲ್ಲಿ ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾಗಿದೆ. 100 ಕ್ಕೂ ಅಧಿಕ ಜನರನ್ನುಪೊಲೀಸರು ಬಂಧಿಸಿದ್ದಾರೆ.

ಕೋಝಿಕ್ಕೋಡ್, ಕೊಚ್ಚಿ, ಆಲಪ್ಪುಳ, ಕೊಲ್ಲಂ ಮತ್ತು ವಯನಾಡಿನಲ್ಲಿ ಕೇರಳ ರಸ್ತೆ ಸಾರಿಗೆ ಬಸ್‌ಗಳ ಮೇಲೆ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದಾರೆ.. ಕೋಝಿಕ್ಕೋಡ್‌ನಲ್ಲಿ ಲಾರಿಯೊಂದರ ಮೇಲೂ ದಾಳಿ ಮಾಡಲಾಗಿದೆ. ಕೊಚ್ಚಿಯಲ್ಲಿ ಆಲುವಾ-ಪೆರುಂಬವೂರು ಮಾರ್ಗದಲ್ಲಿ ಸಂಚರಿಸುತ್ತಿದ್ದ ಎರಡು ಕೆಎಸ್‌ಆರ್‌ಟಿಸಿ ಬಸ್‌ಗಳ ಮೇಲೂ ಪಿಎಫ್‌ಐ ಕಾರ್ಯಕರ್ತರು ದಾಳಿ ನಡೆಸಿದ್ದಾರೆ.

ಕೇರಳ ಪೊಲೀಸರು ರಾಜ್ಯದಲ್ಲಿ ಭದ್ರತೆಯನ್ನು ಹೆಚ್ಚಿಸಿದ್ದಾರೆ. ಪೊಲೀಸರು ಪಿಎಫ್ ಐ ಮುಖಂಡರಿಗೆ ನೋಟಿಸ್ ಕಳುಹಿಸಿದ್ದು, ಕಾನೂನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

