ಉರ್ವ ಚಿಲಿಂಬಿ ಶ್ರೀ ಮಲರಾಯ ಧೂಮಾವತಿ ದೈವಸ್ಥಾನ ಸೇವಾ ಸಮಿತಿ ಅಧ್ಯಕ್ಷರಾಗಿ ಎ.ವಿ ಸುರೇಶ್ ರಾವ್ ಆಯ್ಕೆ
ಮಂಗಳೂರು: ಉರ್ವ ಚಿಲಿಂಬಿ ಶ್ರೀ ಮಲರಾಯ ಧೂಮಾವತಿ ದೈವಸ್ಥಾನ ಸೇವಾ ಸಮಿತಿಗೆ 2022- 23ನೇ ಸಾಲಿಗೆ ನಡೆದ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷರಾಗಿ ಎ.ವಿ. ಸುರೇಶ್ ರಾವ್ ಅವಿರೋಧವಾಗಿ ಪುನರಾಯ್ಕೆಗೊಂಡಿದ್ದಾರೆ.

ಪ್ರಧಾನ ಕಾರ್ಯದರ್ಶಿ ಎಂ. ಸುಧಾಕರ ರಾವ್ ಚಿಲಿಂಬಿ ವಾರ್ಷಿಕ ವರದಿ ಮಂಡಿಸಿದರು ಕೋಶಾಧಿಕಾರಿ ರಾಕೇಶ್ ಸಾಲಿಯಾನ್ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು.
ಎ.ವಿ. ಸುರೇಶ್ ರಾವ್-ಅಧ್ಯಕ್ಷರು, ಡಾ. ಬಿ. ಜಿ. ಸುವರ್ಣ ಹಾಗೂ ಸದಾನಂದ ಎಸ್. ಅಮೀನ್- ಗೌರವಾಧ್ಯಕ್ಷರು, ಯು. ಸೋಮಶೇಖರ್ ಹಾಗೂ ತುಕಾರಾಮ ಕಾಂಟ್ರ್ಯಾಕ್ಟರ್- ಉಪಾಧ್ಯಕ್ಷರು, ರಾಕೇಶ್ ಸಾಲಿಯಾನ್- ಪ್ರಧಾನ ಕಾರ್ಯದರ್ಶಿ, ಸೋಮಶೇಖರ್ ಹೊಯ್ಗೆಬೈಲ್- ಕೋಶಾಧಿಕಾರಿ ಮನೋಜ್ ಕುಮಾರ್ ಹಾಗೂ ಕಿಶೋರ್ ಸಾನದ ಮನೆ- ಜೊತೆ ಕಾರ್ಯದರ್ಶಿ, ವಿನೋದ್ ಸುವರ್ಣ -ಆಂತರಿಕ ಲೆಕ್ಕ ಪರಿಶೋಧಕರು, ಗಣೇಶ್ ಕುಲಾಲ್ ಉರ್ವ( ಮನಪಾ ಸದಸ್ಯರು), ಎಂ. ಸುಧಾಕರ ರಾವ್, ಬಿ. ಸದಾನಂದ, ರುಜಿತ್ ಹಾಗೂ ಪುರಂದರ ಸಾನದ ಮನೆ- ಸಲಹೆಗಾರರು, ಅಶ್ವಿನ್ ಕುಮಾರ್- ಹಾಗೂ ಫುರುಷೋತ್ತಮ ಸುವರ್ಣ- ಆಹ್ವಾನಿತರು. ಇದೇ ಸಂದರ್ಭ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆರಿಸಲಾಯಿತು. ಸಭೆಯಲ್ಲಿ ಶ್ರೀ ಮಲರಾಯ ದೈವದ ಪಾತ್ರಿ ದೇವರಾಜ್ ಎಸ್. ಅಮೀನ್ ಉಪಸ್ಥಿತರಿದ್ದರು.