ಮಂಗಳೂರು: ಬೆಳ್ಳಂಬೆಳಗ್ಗೆ SDPI, PFI ಜಿಲ್ಲಾ ಕಚೇರಿ ಸೇರಿದಂತೆ ನಾಯಕರ ಮನೆ ಮೇಲೆ NIA ದಾಳಿ
ಮಂಗಳೂರು: ಗುರುವಾರ ಬೆಳ್ಳಂಬೆಳಗ್ಗೆ ಎನ್‌ಐಎ ಅಧಿಕಾರಿಗಳು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಜಿಲ್ಲಾ ಕಚೇರಿ ಸೇರಿದಂತೆ ಪಿಎಫ್‌ಐ ನಾಯಕರ ಮನೆ ಮೇಲೆ ದಾಳಿ ನಡೆಸಿದ್ದಾರೆ.

ಕಳೆದ ಕೆಲವು ದಿನಗಳಿಂದ ರಾಜ್ಯ ಪಿಎಫ್ ಐ ನಾಯಕರ ಮನೆ ಮೇಲೆ ದಾಳಿ ನಡೆಸುತ್ತಿರುವ ಎನ್‌ಐಎ ಇಂದು ಮಂಗಳೂರು ಹೊರವಲಯದ ಬಜ್ಜೆ ಜೋಕಟ್ಟೆ ಸೇರಿದಂತೆ ಕೆಲವೆಡೆ ರಾಜ್ಯ ಪಿಎಫ್‌ಐ ನಾಯಕರ ಮನೆ ಮೇಲೆ ದಾಳಿ ನಡೆಸಿದೆ.

ನಾಯಕರ ಮನೆ ಮೇಲೆ ಎನ್‌ಐಎ ಅಧಿಕಾರಿಗಳು ದಾಳಿ ನಡೆಸುತ್ತಿರುವ ಸುದ್ದಿ ತಿಳಿಯುತ್ತಿದ್ದಂತೆ ಮನೆ ಮುಂಭಾಗ ಪಿಎಫ್‌ಐ ಕಾರ್ಯಕರ್ತರು ಜಮಾಯಿಸಿದ್ದು ಗೋ ಬ್ಯಾಕ್ ಎನ್‌ಐಎ ಘೋಷಣೆ ಕೂಗಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಬಜ್ಜೆ ಜೋಕಟ್ಟೆ, ಕಾವೂರು ಕುಳಾಯಿ ಸೇರಿದಂತೆ ನಗರದ ಹಲವೆಡೆ Sdpi ನಾಯಕರ ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆಸಲಾಗಿದೆ. ಏಕಕಾಲಕ್ಕೆ ವಿವಿಧ ವಾಹನಗಳಲ್ಲಿ ಆಗಮಿಸಿ ಅಧಿಕಾರಿಗಳು ಶೋಧ ಕಾರ್ಯ ನಡೆಸುತ್ತಿದ್ದಾರೆ.
ವಿಟ್ಲ ಠಾಣಾ ವ್ಯಾಪ್ತಿಯ ನಾರ್ಶ ಸಮೀಪದ ಬೋಳಂತೂರು ಗ್ರಾಮದ ಬೀರುಕೋಡಿ ನಿವಾಸಿ SDPI ನಾಯಕ ತಂಸೀರ್ ಮನೆಗೆ ಪೊಲೀಸರು ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಉಪ್ಪಿನಂಗಡಿ, ಕಲ್ಲಡ್ಕ ಬೋಳಂತೂರುನಲ್ಲಿಯೂ ದಾಳಿ ನಡೆದ ಬಗ್ಗೆ ವರದಿಯಾಗಿದೆ.