ತೊಕ್ಕೊಟ್ಟು: ತೀಯಾ ಸೇವಾ ಸಹಕಾರ ಸಂಘದ ಆರನೇ ವಾರ್ಷಿಕ ಮಹಾಸಭೆ
ಮಂಗಳೂರು: ತೊಕ್ಕೊಟ್ಟು ಪ್ರಧಾನ ಕಚೇರಿ ಹೊಂದಿರುವ ತೀಯಾ ಸೇವಾ ಸಹಕಾರ ಸಂಘದ ಆರನೇ ವಾರ್ಷಿಕ ಮಹಾಸಭೆ ತೊಕ್ಕೊಟ್ಟು ಭಟ್ನಗರದ ಪೂಜ್ಯ ಕುದ್ಮುಲ್ ರಂಗರಾವ್ ಸಭಾ ಭವನದಲ್ಲಿ ಭಾನುವಾರ ನಡೆಯಿತು.
ಆಡ್ಕ ಭ್ರಾಮರೀ ಸ್ವಸಹಾಯ ಸಂಘದ ಅಧ್ಯಕ್ಷೆ ಶ್ರೀಮತಿ ಚಂದ್ರಿಕಾ, ಭಾರತೀಯ ತೀಯಾ ಸಮಾಜದ ಕೇಂದ್ರ ಸಮಿತಿ ಉಪಾಧ್ಯಕ್ಷ ರಾಜಗೋಪಾಲ್, ಸಮಾಜದ ಹಿರಿಯರಾದ ಕುಂಞರಾಮನ್ ಹಾಗೂ ಸಂಘದ ಅಧ್ಯಕ್ಷ, ಉಪಾಧ್ಯಕ್ಷ, ನಿರ್ದೇಶಕರುಗಳು, ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಸಿಬ್ಬಂದಿ ಜೊತೆಗೂಡಿ ಶ್ರೀ ಭಗವತೀ ಮಾತೆ ಹಾಗೂ ನಾರಾಯಣಗುರುವಿಗೆ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಸಂಘದ ಅಧ್ಯಕ್ಷ ಎಂ. ದಿನೇಶ್ ಕುಂಪಲ, ಉಪಾಧ್ಯಕ್ಷ ಸುನಿಲ್, ನಿರ್ದೇಶಕರುಗಳಾದ ನಾಗಪ್ಪ ಬಿ ಅಡ್ಯಾರ್, ಪ್ರಕಾಶ್ ಉಳ್ಳಾಲ್, ಸೂರಜ್ , ರಜನಿ , ಲತಾ, ಹರಿಣಾಕ್ಷಿ , ಮಾಧವ , ಅಭಿಷೇಕ್ ಬೆಳ್ಚಾಡ, ಉಮೇಶ್ ಹಾಗೂ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಯಶವಂತಿ
ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕುಮಾರಿ ಸೌಜನ್ಯ ಪ್ರಾರ್ಥಿಸಿದರು. ಸಂಘದ ಅಧ್ಯಕ್ಷ ಎಂ.
ದಿನೇಶ್ ಕುಂಪಲ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಯಶವಂತಿ ಲೆಕ್ಕಪತ್ರ ಮಂಡಿಸಿ ವಾರ್ಷಿಕ ವರದಿ ಮಂಡಿಸಿದರು.
ನಿರ್ದೇಶಕ ಪ್ರಕಾಶ್ ಉಳ್ಳಾಲ್ ವಂದಿಸಿದರು. ನಿರ್ದೇಶಕ ಸತೀಶ್ ಕುಮಾರ್ ಪುಂಡಿಕಾಯಿ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಅಗಲಿದ ಸಂಘದ ಸದಸ್ಯರನ್ನು ಸ್ಮರಿಸಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಸಂಘದಲ್ಲಿ ಭದ್ರತಾ ಠೇವಣಿ ಇರಿಸಿದ ಪುಷ್ಪ ಸೂರಜ್ ಅವರಿಗೆ ಭದ್ರತಾ ಠೇವಣಿ ಪತ್ರವನ್ನು ವಿತರಿಸಲಾಯಿತು.
ಸಂಘದ ನೂತನ ತೊಕ್ಕೊಟ್ಟು ಶಾಖೆಯ ವ್ಯವಸ್ಥಾಪಕ ಸ್ವಸ್ತಿಕ್, ಪ್ತಧಾನ ಕಚೇರಿಯ ಸಿಬ್ಬಂದಿ ಉಷಾ, ಆಶಾ ಹಾಗೂ ಪಿಗ್ಮಿ ಸಂಗ್ರಾಹಕ ಅವರನ್ನು ಗೌರವಿಸಲಾಯಿತು.
ಸಂಘದ ಏಳಿಗೆಯಲ್ಲಿ ಸ್ವಸಹಾಯ ಸಂಘಗಳ ಪಾತ್ರ ಮಹತ್ವದ್ದಾಗಿದ್ದು ಸಹಕಾರ ಸಂಘ ಹಾಗೂ ಸ್ವಸಹಾಯ ಸಂಘದ ಸದಸ್ಯರ ನಡುವಿನ ಬಾಂಧವ್ಯ ಸದಾ ಗಟ್ಟಿಯಾಗಿದ್ದರೆ ಮಾತ್ರ ಇನ್ನಷ್ಟು ಅಭಿವೃದ್ಧಿ ಸಾಧಿಸಬಹುದು. ಸಂಘದ ಎಲ್ಲ ಸದಸ್ಯರು ಆರಂಭದಿಂದಲೂ ಸಂಘದ ಮೇಲಿಟ್ಟ ನಂಬಿಕೆ, ವಿಶ್ವಾಸ ಹಾಗೂ ನಮ್ಮ ಸಂಘ ಎಂಬ ಭಾವನೆ ಮೈಗೂಡಿಸಿರುವುದರಿಂದಲೇ ನಮಗೆ ಆರಂಭದಿಂದಲೂ ಸ್ವಸಹಾಯ ಒಂದು ಸಂಘಟನಾ ಶಕ್ತಿಯಾಗಿ ಉತ್ಸಾಹದ ಚಿಲುಮೆಯಾಗಿ ಸ್ಫೂರ್ತಿ ನೀಡುತ್ತಾ ಬಂದಿದೆ.
ಯಶವಂತಿ ಉಚ್ಚಿಲ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ
ತೀಯಾ ಸಮಾಜದ ಅಭಿವೃದ್ಧಿ ದೃಷ್ಟಿಯಿಂದಲೇ ಸಹಕಾರ ಸಂಘವನ್ನು ಹುಟ್ಟು ಹಾಕಿದ್ದೇವೆ. ನಮ್ಮ ಮೇಲಿನ ನಂಬಿಕೆಯಿಂದಲೇ ಹನ್ನೆರಡು ಮಂದಿಯನ್ನು ಆರಿಸಿ ಕಳುಹಿಸಿದ ನಿಮ್ಮ ನಂಬಿಕೆಗೆ ಚ್ಯುತಿ ಬಾರದಂತೆ ಪಾರದರ್ಶಕವಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದೇವೆ. ಸಂಘದ ಎಲ್ಲ ನಿರ್ದೇಶಕರುಗಳು, ಸಿಬ್ಬಂದಿಯ ಅವಿರತ ಶ್ರಮ ಹಾಗೂ ನಿಸ್ವಾರ್ಥ ಸೇವೆ ಸಂಘದ ಅಭಿವೃದ್ಧಿಗೆ ಕಾರಣವಾಗಿದೆ. ನೂತನ ಶಾಖೆ ಆರಂಭವಾದ ಕಾರಣ ಡಿವಿಡೆಂಟ್ ನೀಡುವ ಯೋಜನೆ ಸ್ವಲ್ಪ ಮುಂದೂಡಲ್ಪಟ್ಟರೂ ನವೆಂಬರ್ ತಿಂಗಳಿನಲ್ಲಿ ನಡೆಯಲಿರುವ ನೂತನ ಶಾಖಾ ವಾರ್ಷಿಕೋತ್ಸವದಲ್ಲಿ ಗುಂಪಿನ ಮೂಲಕ ನಮಗೆ ಆರ್ಥಿಕ ಬಲ ನೀಡಿದ ಸ್ವಸಹಾಯ ಸಂಘದ ಸದಸ್ಯರಿಗೆ ಲಾಭಾಂಶ ನೀಡಲಿದ್ದೇವೆ.
ಇತರ ಸಹಕಾರ ಸಂಘಗಳಿಗಿಂತ ತೀಯಾ ಸೇವಾ ಸಹಕಾರ ಸಂಘ ಕಡಿಮೆ ಲಾಭ ದೃಷ್ಟಿಯಿಂದ ಠೇವಣಿದಾರರಿಗೆ ಶೇಕಡಾವಾರು ಹೆಚ್ಚಿನ ಬಡ್ಡಿ ನೀಡುತ್ತಿದ್ದೇವೆ. ಈ ಸೌಲಭ್ಯವನ್ನು ಸದಸ್ಯರು ಸದುಪಯೋಗ ಪಡಿಸಿಕೊಳ್ಳಬೇಕು ಎಂ. ದಿನೇಶ್ ಕುಂಪಲ
ಅಧ್ಯಕ್ಷರು ತೀಯಾ ಸೇವಾ ಸಹಕಾರ ಸಂಘ