ಬಿ.ರಮಾನಾಥ ರೈ ಅವರ 71ನೇ ಹುಟ್ಟು ಹಬ್ಬದ ಪ್ರಯುಕ್ತ ಬೃಹತ್ ರಕ್ತದಾನ ಶಿಬಿರ
ಬಂಟ್ವಾಳ: ಯುವ ಕಾಂಗ್ರೆಸ್ ಸಮಿತಿ ಪಾಣೆಮಂಗಳೂರು ಬ್ಲಾಕ್ ಹಾಗೂ ಅಲ್ಪಸಂಖ್ಯಾತರ ಘಟಕದ ಪಾಣಿ ಬ್ಲಾಕ್ ವತಿಯಿಂದ ಮಾಜಿ ಸಚಿವರಾದ ಬಿ ರಮಾನಾಥ ರೈ ಅವರ 71ನೇ ಹುಟ್ಟು ಹಬ್ಬದ ಪ್ರಯುಕ್ತ ಬಿ.ಸಿ ರೋಡ್ ಸಮೀಪದ ರಂಗೋಲಿ ಸಭಾಂಗಣದಲ್ಲಿ ನಡೆದ ಬೃಹತ್ ರಕ್ತದಾನ ಶಿಬಿರದಲ್ಲಿ ಒಟ್ಟು 71ಯೂನಿಟ್ ರಕ್ತ ಸಂಗ್ರಹ ದೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಬೆಳಿಗ್ಗೆ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಶ್ರೀ ಬಿ ರಮಾನಾಥ ರೈ ಅವರ ಘನ ಉಪಸ್ಥಿತಿಯಲ್ಲಿ ಕೃಷ್ಣ ಕುಮಾರ್ ಪೂಂಜಾ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.
ಸಭೆಯಲ್ಲಿ ಶಾಹುಲ್ ಹಮೀದ್ ಕೆಕೆ, ಸುದೀಪ್ ಕುಮಾರ್ ಶೆಟ್ಟಿ, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬೇಬಿ ಕುಂದರ್,ಪದ್ಮಶೇಖರ್ ಜೈನ್, ಪಿಯೂಸಿ ಎಲ್ ರೋಡ್ರಿಗಸ್, ಅಬ್ಬಾಸ್ ಅಲಿ,ರಾಜ ಬಂಟ್ವಾಳ, ಮೊಹಮ್ಮದ್ ಶರೀಫ್ , ಲುಕ್ಮಾನ್ ಬಂಟ್ವಾಳ್, ಜಯಂತಿ ಎಸ್ ಪೂಜಾರಿ, ಮಲ್ಲಿಕಾ ಶೆಟ್ಟಿ, ಚಂದ್ರಶೇಖರ್ ಪೂಜಾರಿ, ಕುಸುಮಾಕರ್ ಕಾರ್ಯದರ್ಶಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಪಿ ಎ ರಹೀಂ ಪ್ರಶಾಂತ್ ಆಳ್ವಾ , ಲೋಕೇಶ್ ಸುವರ್ಣ, ರಮೇಶ್ ಪಣೋಲಿಬೈಲು ,ವಿನಯ್ ಕುಮಾರ್ ಸಿಂಧ್ಯಾ, ಇಬ್ರಾಹಿಂ ನವಾಝ್ ಸ್ವಾಗತಿಸಿದರು. ಹರ್ಷದ್ ಸರವು , ಧನ್ಯವಾದಗಳನ್ನು ಸಮರ್ಪಿಸಿದರು. ಗಣೇಶ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು