ಬಂಟ್ವಾಳ: ಸಿಪಿಐ ಜಿಲ್ಲಾ ಕಾರ್ಯದರ್ಶಿಯಾಗಿ ಆಯ್ಕೆ
ಬಂಟ್ವಾಳ: ಬಂಟ್ವಾಳದಲ್ಲಿ ಈಚೆಗೆ ನಡೆದ ಭಾರತ ಕಮ್ಯೂನಿಸ್ಟ್ ಪಕ್ಷ(ಸಿಪಿಐ) ಇದರ ೨೪ ನೇ ಜಿಲ್ಲಾ ಸಮ್ಮೇಳನದಲ್ಲಿ ಸಿಪಿಐ ಜಿಲ್ಲಾ ಕಾರ್ಯದರ್ಶಿಯಾಗಿ ಬಿ.ಶೇಖರ್ ಆಯ್ಕೆಯಾಗಿದ್ದಾರೆ. ಸಹ ಕಾರ್ಯದರ್ಶಿಯಾಗಿ ವಿ.ಸೀತಾರಾಮ ಬೇರಿಂಜ ಪುನರಾಯ್ಕೆಗೊಂಡು ಸಹ ಕಾರ್ಯಯದರ್ಶಿ ಸ್ಥಾನಕ್ಕೆ ಸುರೇಶ್ ಕುಮಾರ್ ಬಂಟ್ವಾಳ್ ಆಯ್ಕೆಗೊಂಡರು. ಇದೇ ವೇಳೆ ೯ ಮಂದಿ ಕಾರ್ಯದರ್ಶಿ ಮತ್ತು ೧೭ ಮಂದಿ ಜಿಲ್ಲಾ ಮಂಡಳಿ ಸದಸದ್ಯರಾಗಿ ಆಯ್ಕೆಗೊಂಡಿದ್ದಾರೆ.

೨೫ರಿಂದ ಹಾಸನದಲ್ಲಿ ರಾಜ್ಯ ಸಮ್ಮೇಳನ:
ಇದೇ ಸೆ.೨೫ರಿಂದ ೨೭ರತನಕ ಹಾಸನದಲ್ಲಿ ೨೪ನೇ ರಾಜ್ಯ ಸಮ್ಮೇಳನ ನಡೆಯಲಿದ್ದು, ಜಿಲ್ಲೆಯಿಂದ ಸುಮಾರು ೩೦ ಮಂದಿ ಮತ್ತು ಬಹಿರಂಗ ರ‍್ಯಾಲಿಗೆ ೨೦೦ ಮಂದಿ ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.