chinaನವದೆಹಲಿ: ಚೀನಾ ದೇಶ ತನ್ನ ನರಿ ಬುದ್ದಿ ಬಿಡುವ ಲಕ್ಷಣ ಕಾಣುತ್ತಿಲ್ಲ. ಭಾರತದ ವಿರುದ್ಧ ಒಂದಲ್ಲಾ ಒಂದು ರೀತಿಯಲ್ಲಿ ಕತ್ತಿಮಸೆಯುತ್ತಿರುವ ಚೀನಾ ಇದೀಗ ಭಾರತದ ಗಡಿಯಲ್ಲಿ ಪಾಕಿಸ್ತಾನದ ುಗ್ತರಗಾಮಿಗಳಿಗೆ ತರಬೇತಿ ನೀಡುವ ಮೂಲಕ ಮತ್ತೆ ತನನ ಕಳ್ಳಬುದ್ಧಿ ತೋರಿಸಿದೆ.

ರಜೌರಿ ವಲಯದಲ್ಲಿರುವ ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯ ವಿರುದ್ಧ ದಿಕ್ಕಿನಲ್ಲಿರುವ ಸೇನಾ ನೆಲೆಯಲ್ಲಿ ಚೀನಾ ಪಾಕ್​ ಸೇನೆಗೆ ಶಸ್ತ್ರಾಸ್ತ್ರ ತರಬೇತಿ ಕೊಡುತ್ತಿದ್ದೆಯಂತೆ. ಬಿಎಸ್​ಎಫ್ ಗುಪ್ತಚರ ದಳ ಈ ಮಾಹಿತಿ ನೀಡಿದೆ. ಈ ಪ್ರದೇಶವನ್ನು ಪಾಕ್ ಸೈನಿಕರು ಕಾವಲು ಕಾಯುತ್ತಿದ್ದಾರಂತೆ. ಶ್ರೀಗಂಗಾನಗರ ವಲಯದ ವಿರುದ್ಧ ದಿಕ್ಕಿನಲ್ಲಿರುವ ಪ್ಯಾರಾಮಿಲಿಟರಿ ನೆಲೆಯನ್ನು ಪಾಕ್ ಸೇನೆ ತನ್ನ ವಶಕ್ಕೆ ಪಡೆದಿದೆ. ಪಂಜಾಬ್​‘ನ ಗುರುದಾಸ್​‘ಪುರ ವಲಯದಲ್ಲೂ ಪಾಕ್ ಸೇನೆ ವೀಕ್ಷಣಾ ಟವರ್ ಸ್ಥಾಪಿಸಿದೆ. ಗಡಿಯಲ್ಲಿ ಭಾರತೀಯ ಯೋಧರನ್ನು ಗುರಿಯಾಗಿಸಿ ದಾಳಿ ನಡೆಸಲು ಶಾರ್ಪ್​ ಶೂಟರ್​‘ಗಳು ಮತ್ತು ಅಡಗಿ ಕುಳಿತು ದಾಳಿ ನಡೆಸುವವರನ್ನು ನೇಮಿಸಲು ಪಾಕಿಸ್ತಾನ ಸೇನೆ ಮುಂದಾಗಿದೆ.

ಪಾಕಿಸ್ತಾನ ಚೀನಾದಲ್ಲಿ ಭಯೋತ್ಪಾದನೆಯ ಮೂಲಕ ಮತ್ತೆ ಮತ್ತೆ ವಿಧ್ವಂಸ ಕೃತ್ಯಗಳನ್ನು ನಡೆಸುತ್ತಿದ್ದರೂ ಚೀನಾ ಮಾತ್ರ ಪಾಕಿಸ್ತಾನದ ಹಂದಿ ಬಾಲ ಹಿಡಿಯುತ್ತಲೇ ಇದೆ.

 

By suddi9

Leave a Reply

Your email address will not be published. Required fields are marked *