ಬಂಟ್ವಾಳ:ಬಂಟ್ವಾಳ ರೋಟರಿ ಕ್ಲಬ್ ಮತ್ತು ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನ ವತಿಯಿಂದ ಇದೇ 15ರಿಂದ 24ರತನಕ ತಾಲ್ಲೂಕಿನ ವಿವಿಧೆಡೆ ಆರೋಗ್ಯ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಉಚಿತ ‘ಕ್ಷೇಮ ಹೆಲ್ತಾ ಕಾರ್ಡ್ ‘ ವಿತರಣೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ರೋಟರಿ ಕ್ಲಬ್ಬಿನ ಅಧ್ಯಕ್ಷ ಪ್ರಕಾಶ ಕಾರಂತ ಹೇಳಿದ್ದಾರೆ.
ಬಿ.ಸಿ.ರೋಡ್ನಲ್ಲಿ ಶುಕ್ರವಾರ ಸಂಜೆಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಇದೇ 15ರಂದು ಸಂಜೆ ಬಿ.ಸಿ.ರೋಡ್ ರೋಟರಿ ಭವನದಲ್ಲಿ ವಿಶೇಷ ಸಭೆ ಮತ್ತು ಮಕ್ಕಳ ಪ್ರತಿಭಾ ಪ್ರರ್ದಶನ, ರಾತ್ರಿ 8ಗಂಟೆಗೆ ಕುಕ್ಕಾಜೆಯಲ್ಲಿ ಕ್ಷೇಮ ಹೆಲ್ತ್ ಕಾರ್ಡ್ ವಿತರಣೆ, 16ರಂದು ಬೆಳಿಗ್ಗೆ ಫರಂಗಿಪೇಟೆಯಲ್ಲಿ ಕ್ಷೇಮ ಹೆಲ್ತಾ ಕಾರ್ಡ್ ವಿತರಣೆ ಮತ್ತು ಜನಶ್ರೀ ವಿದ್ಯಾರ್ಥಿ ವೇತನ ವಿತರಣೆ, ಬಂಟ್ವಾಳ ಪುರಸಭೆ ಮತ್ತು ವಕೀಲರ ಸಂಘದ ಜೊತೆಗೆ ಬಿ.ಸಿ.ರೋಡ್ ಪೇಟೆಯಲ್ಲಿ ‘ಸ್ವಚ್ಛತಾ ಅಂದೋಲನ ಕಾರ್ಯಕ್ರಮವನ್ನೂ ಆಯೋಜಿಸಲಾಗಿದೆ.
ಅಂದು ಸಂಜೆ ಬೆಳ್ಳೂರು ಸಬಾಂಗಣ ಮತ್ತು ಬೆಂಜನಪದವಿನಲ್ಲಿ ಹೆಲ್ತಾ ಕಾರ್ಡ್ ವಿತರಣೆ, 17ರಂದು ಬೆಳಿಗ್ಗೆ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ‘ಮಕ್ಕಳ ಸಂರಕ್ಷಣೆ ಮತ್ತು ಪೋಕ್ಸೊ ಕಾಯ್ದೆ ಬಗ್ಗೆ ಮಾಹಿತಿ ಕಾರ್ಯಗಾರ ನಡೆಯಲಿದೆ. 18ರಂದು ಬೆಳಿಗ್ಗೆ ಮೆಲ್ಕಾರ್, ಬಾಳ್ತಿಲ, ಸಂಜೆ ಸುಧೇಕಾರ್ ಎಂಬಲ್ಲಿ ಹೆಲ್ತಾ ಕಾರ್ಡ್ ವಿತರಣೆ, 24ರಂದು ಬೆಳಿಗ್ಗೆ ಮಕ್ಕಳ ಸಂರಕ್ಷಣೆ ಮತ್ತು ಪೋಕ್ಸೋ ಕಾಯ್ದೆ ಬಗ್ಗೆ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಶಿಕ್ಷಕರಿಗೆ ಮಾಹಿತಿ ಶಿಬಿರ ಏರ್ಪಡಿಸಲಾಗಿದೆ ಎಂದು ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಸೇವಾಂಜಲಿ ಪ್ರತಿಷ್ಠಾನ ಟ್ರಸ್ಟಿ ಕೆ.ಕೆ.ಪೂಂಜ, ಪ್ರಮುಖರಾದ ಸಂಜೀವ ಪೂಜಾರಿ, ಬಿ.ರಿತೇಶ ಬಾಳಿಗಾ, ಕೆ.ಎನ್.ಹೆಗ್ಡೆ ಮತ್ತಿತರರು ಇದ್ದರು.
