ವಿಟ್ಲ: ಶೋಕ ಮಾತಾ ದೇವಾಲಯ ವಿಟ್ಲ, ಇದರ ಯುವ ಸಂಘಟನೆಗಳಾದ ಐಸಿವೈಯೆಂ ಮತ್ತು ವೈಸಿಯಸ್ ಜಂಟಿ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಶಿಕ್ಷಕರನ್ನು ಗೌರವಿಸುವ ಕಾರ್ಯಕ್ರಮ ವಿಟ್ಲ ಶೋಕಮಾತೆಯ ಇಗರ್ಜಿಯ ಸಭಾ ಭವನದಲ್ಲಿ ನಡೆಸಲಾಯಿತು. ಕಾರ್ಯಕ್ರಮದ ಅದ್ಯಕ್ಷರಾಗಿ ವಿಟ್ಲ ಇಗರ್ಜಿಯ ಧರ್ಮ ಗುರು ವಂ|ಪಾ|ಐವನ್ ಮೈಕೆಲ್ ರೊಡ್ರಿಗಸ್ ಹಾಗು ಮುಖ್ಯ ಅತಿಥಿ ಯಾಗಿ ಸಂತ ಅಲೋಶಿಯಸ್ ಕಾಲೇಜಿನ ಭೌತಶಾಸ್ತ್ರ ಪ್ರಾಧ್ಯಾಪಕರಾದ ಡಾ. ರೀಟಾ ಕ್ರಾಸ್ತಾ ರವರು ಶಿಕ್ಷಕರನ್ನು ಉದ್ದೇಶಿಸಿ ಹಿತ ನುಡಿಗಳನ್ನಾಡಿದರು. ಈ ಕಾರ್ಯಕ್ರಮದಲ್ಲಿ 35 ಶಿಕ್ಷಕರನ್ನು ಗೌರವಿಸಲಾಯಿತು. ಸಂಘಟನೆಯ ಎಲ್ಲಾ ಸದಸ್ಯರು ಹಾಜರಿದ್ದರು.

ವೇದಿಕೆಯಲ್ಲಿ ವಿಟ್ಲ ಚರ್ಚಿನ ಪಾಲನಾ ಸಮಿತಿಯ ಉಪಾದ್ಯಕ್ಷರು ಶ್ರಿ ಮನೊಹರ್ ಲ್ಯಾನ್ಸಿ ಡಿಸೋಜ, ಪಾಲನಾ ಸಮಿತಿಯ ಶಿಕ್ಷಣ ಆಯೋಗದ ಸಂಚಾಲಕರು ಶ್ರೀಮತಿ ಜೆಸಿಂತಾ ಲಸ್ರಾದೊರವರು,ಸಂಘಟನೆಗಳ ವಲಯ ಅದ್ಯಕ್ಷರಾದ ಅವಿಲ್ ರೊಡ್ರೀಗಸ್ ಹಾಗು ಜೊಯ್ವಿನ್ ಲೋಬೊರವರು ಉಪಸ್ಥಿತರಿದ್ದರು. ಜೊಸ್ಟನ್ ಲೋಬೊರವರು ಸ್ವಾಗತಿಸಿದರು, ಪ್ರೀತಂ ಲೋಬೊರವರು ದನ್ಯವಾದಗೈದರು,ದಿಲ್ರೋಯ್ ಹಾಗು ಕ್ರಿಸ್ಟಲ್ ಲೋಬೊ ರವರು ಕಾರ್ಯಕ್ರಮ ನಿರೂಪಿಸಿದರು.
