ರಾಮ ಮೂಲ್ಯ ನಿಧನ
ಬಂಟ್ವಾಳ: ರಾಯಿ ಸಮೀಪದ ತಡ್ಯಾಲ ನಿವಾಸಿ, ಪ್ರಗತಿಪರ ಕೃಷಿಕ ರಾಮ ಮೂಲ್ಯ (೭೦) ಇವರು ಅಸೌಖ್ಯದಿಂದ ಆ.30ರಂದು ಮಂಗಳವಾರ ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದರು. ಮೃತರಿಗೆ ಪತ್ನಿ, ನಾಲ್ವರು ಪುತ್ರರು ಮತ್ತು ಇಬ್ಬರು ಪುತ್ರಿಯರು ಇದ್ದಾರೆ. ಪ್ರಗತಿಪರ ಕೃಷಿಕರಾಗಿ, ಹೈನುಗಾರರಾಗಿ ಗುರುತಿಸಿಕೊಂಡಿದ್ದರು.