ಮಣಿಹಳ್ಳ : ಮೂರ್ತೆದಾರರ ಸೇವಾ ಸಹಕಾರಿ ಸಂಘ ಸೆ.೪ರಂದು ೯ನೇ ಶಾಖೆ ಆರಂಭ
ಬಂಟ್ವಾಳ: ಇಲ್ಲಿನ ಸಜಿಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ೯ನೇ ಶಾಖೆಯು ಮಣಿಹಳ್ಳ ಶೇಷಾದ್ರಿ ಕಾಂಪ್ಲೆಕ್ಸ್ ನಲ್ಲಿ ಸೆ.೪ರಂದು ಬೆಳಿಗ್ಗೆ ಗಂಟೆ ೯.೩೦ಕ್ಕೆ ಶುಭಾರಂಭಗೊಳ್ಳಲಿದೆ.
ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ನೂತನ ಶಾಖೆ ಉದ್ಘಾಟಿಸಲಿದ್ದು, ಮಾಜಿ ಸಚಿವ ಬಿ.ರಮಾನಾಥ ರೈ ಗಣಕಯಂತ್ರ ಉದ್ಘಾಟಿಸುವರು. ಮೆಲ್ಕಾರ್ ಶ್ರೀ ಗುರು ಕ್ರೆಡಿಟ್ ಸೊಸೈಟಿ ಅಧ್ಯಕ್ಷ ಕೆ. ಹರಿಕೃಷ್ಣ ಬಂಟ್ವಾಳ್ ಭದ್ರತಾ ಕೊಠಡಿ ಉದ್ಘಾಟಿಸಿ, ನಾವೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಉಮೇಶ್ ಕುಲಾಲ್ ಠೇವಣಿ ಪತ್ರ ಬಿಡುಗಡೆಗೊಳಿಸುವರು. ಕಕ್ಯಪದವು ಶ್ರೀ ಬ್ರಹ್ಮಬೈದರ್ಕಳ ಗರಡಿ ಕ್ಷೇತ್ರದ ಅಧ್ಯಕ್ಷ ಕೆ.ಮಾಯಿಲಪ್ಪ ಸಾಲ್ಯಾನ್, ಫರ್ಲಾ ವೆಂಲಕಣಿ ಚರ್ಚಿನ ಧರ್ಮಗುರು ಜೋನ್ ಪಿರೇರಾ, ಅಗ್ರಹಾರ ಎಂ.ಜೆ.ಎA. ಖತೀಬ ಶಮೀರ್ ಫೈಝಿ, ಉದ್ಯಮಿ ಜಿತೇಂದ್ರ ಸಾಲ್ಯಾನ್ ಮತ್ತಿತರ ಗಣ್ಯರು ಭಾಗವಹಿಸುವರು.
ಈಗಾಗಲೇ ಬೋಳಂತೂರು, ಚೇಳೂರು, ಫಜೀರು, ವಾಮದಪದವು, ಸಿದ್ಧಕಟ್ಟೆ, ಅಣ್ಣಳಿಕೆ, ಮಾರ್ನಬೈಲು ಶಾಖೆ ಹೊಂದಿದ್ದು, ಮೂರ್ತೆದಾರರು ಸಹಿತ ಕೃಷಿಕರು ಮತ್ತು ಮಹಿಳೆಯರ ಸ್ವಾವಲಂಬನೆ ಬದುಕಿಗೆ ಸಂಘವು ಪ್ರೋತ್ಸಾಹ ನೀಡುತ್ತಿದೆ ಎಂದು ಸಂಘದ ಅಧ್ಯಕ್ಷ ಕೆ.ಸಂಜೀವ ಪೂಜಾರಿ ಮೆಲ್ಕಾರ್ ತಿಳಿಸಿದ್ದಾರೆ.