ರಕ್ತೇಶ್ವರಿ ದೇವಿ ದೇವಸ್ಥಾನದಲ್ಲಿ ತುಳು ಕೂಟ ಇದರ ವತಿಯಿಂದ ಅಮಾವಾಸ್ಯೆ
ಬಂಟ್ವಾಳ : ತಾಲ್ಲೂಕಿನ ಬಿ.ಸಿ.ರೋಡು ರಕ್ತೇಶ್ವರಿ ದೇವಿ ದೇವಸ್ಥಾನದಲ್ಲಿ ತುಳು ಕೂಟ ಇದರ ವತಿಯಿಂದ ಜು.28ರಂದು ಗುರುವಾರ ಆಟಿ ಅಮಾವಾಸ್ಯೆ ಪ್ರಯುಕ್ತ ಭಕ್ತರಿಗೆ ಪಾಲೆ ಮರ ಕೆತ್ತೆ ಕಷಾಯ ವಿತರಿಸಿದರು.
ಸಮಿತಿ ಗೌರವಾಧ್ಯಕ್ಷ ಎ.ಸಿ.ಭಂಡಾರಿ, ಅಧ್ಯಕ್ಷ ಸುದರ್ಶನ್ ಜೈನ್, ದೇವಳದ ಅಧ್ಯಕ್ಷ ವಿಶ್ವನಾಥ ಪೂಜಾರಿ, ರಾಜೇಶ ಎಲ್.ನಾಯಕ್, ಎಚ್ಕೆ ನಯನಾಡು, ಪ್ರಕಾಶ ಶೆಟ್ಟಿ ತುಂಬೆ, ನಾರಾಯಣ ಸಿ.ಪೆರ್ನೆ, ದೇವಪ್ಪ ಕುಲಾಲ್ ಮತ್ತಿತರರು ಇದ್ದರು.