ಬಂಟ್ವಾಳ: ತಾಲೂಕು ಮಟ್ಟದ ವಿಶ್ವಜನಸಂಖ್ಯಾ ದಿನಾಚರಣೆಯನ್ನು ಜು.29ರಂದು ಶುಕ್ರವಾರ ಲಯನ್ಸ್ ಕ್ಲಬ್, ಬಿ. ಸಿ. ರೋಡ್‌ನಲ್ಲಿ ಆರೋಗ್ಯ ಇಲಾಖಾ ವತಿಯಿಂದ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ಶ್ರೀಮತಿ ಜೆಸಿಂತಾ ಉಪಾಧ್ಯಕ್ಷರು, ಪುರಸಭೆ ಬಂಟ್ವಾಳ ಉದ್ಘಾಟಿಸಿ ಜನಸಂಖ್ಯಾ ಸ್ಫೋಟವನ್ನು ತಡೆಗಟ್ಟುವುದು ಪ್ರತಿಯೊಬ್ಬರ ಜವಬ್ದಾರಿ ಹಾಗೂ ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಇನ್ನೂ ಹೆಚ್ಚಿನ ಮುತುವರ್ಜಿಯಿಂದ ಕರ್ತವ್ಯ ನಿಭಾಯಿಸಬೇಕೆಂದು ತಿಳಿಸಿದರು.

ಶ್ರೀಯುತ ಉಮೇಶ್ ಆಚಾರ್ಯ, ಅಧ್ಯಕ್ಷರು ಲಯನ್ಸ್ ಕ್ಲಬ್ ಬಿ. ಸಿ. ರೋಡ್ ಇವರು ಏರುತ್ತಿರುವ ಜನಸಂಖ್ಯಾ ನಿಯಂತ್ರಣದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಗಳ ಪಾತ್ರ ಪ್ರಮುಖ ಎಂಬ ಸಂದೇಶ ನೀಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಡಾ|| ಪುಷ್ಪಲತಾ, ಆಡಳಿತ ವೈದ್ಯಾಧಿಕಾರಿ ತಾಲೂಕು ಆಸ್ಪತ್ರೆ ಬಂಟ್ವಾಳ, ಡಾ|| ಕಿಶೋರ್, ಶಸ್ತ್ರಚಿಕಿತ್ಸಕರು, ತಾಲೂಕು ಆಸ್ಪತ್ರೆ ಬಂಟ್ವಾಳ, ಹಾಗೂ ಶಿಶು ಅಭಿವೃದ್ಧಿ ಇಲಾಖಾ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಡಾ. ವಿಶ್ವೇಶ್ವರ ವಿ. ಕೆ., ಆಡಳಿತ ವೈದ್ಯಾಧಿಕಾರಿ, ಪ್ರಾ. ಆ. ಕೇಂದ್ರ ಅಡ್ಯನಡ್ಕ ಇವರು ಸಂಪನ್ಮೂಲ ವ್ಯಕ್ತಿಯಾಗಿ “ಕುಟುಂಬ ಯೋಜನೆ ಉಪಾಯಗಳನ್ನು ನಮ್ಮದಾಗಿಸಿ ಉನ್ನತಿಯ ಹೊಸ ಅಧ್ಯಾಯ ಬರೆಯೋಣ’’ ಎಂಬ ವಿಚಾರದ ಬಗ್ಗೆ ಮಾಹಿತಿ ನೀಡಿದರು. ಕುಟುಂಬ ಕಲ್ಯಾಣ ಕಾರ್ಯಕ್ರಮದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಸಾಧಕರನ್ನು ಸನ್ಮಾಯಿಸಲಾಯಿತು.

ಆರೋಗ್ಯ ಇಲಾಖೆ ಸಿಬ್ಬಂದಿಗಳಿAದ ಜನಸಂಖ್ಯಾ ನಿಯಂತ್ರಣ ಕುರಿತು ಕುಟುಂಬ ಯೋಜನೆಗಳ ಬಗ್ಗೆ ಹಾಡು, ಕಿರುನಾಟಕ ಕಾರ್ಯಕ್ರಮವಿತ್ತು. ಡಾ|| ಉಮೇಶ್ ಅಡ್ಯಂತಾಯ, ತಾಲೂಕು ಆರೋಗ್ಯಾಧಿಕಾರಿಯವರು ಸ್ವಾಗತಿಸಿ, ಶ್ರೀಮತಿ ಕುಸುಮ ವಂದಿಸಿದರು. ಶ್ರೀ ನವಾಜ್ ಕಾರ್ಯಕ್ರಮ ನಿರೂಪಿಸಿದರು. ತಾಲೂಕು ಆರೋಗ್ಯಾಧಿಕಾರಿ ಕಛೇರಿ ಸಿಬ್ಬಂದಿಗಳು, ತಾಲೂಕಿನ ಎಲ್ಲಾ ಹಿ/ಪ್ರಾ.ಆ.ಸುರಕ್ಷಾಧಿಕಾರಿಗಳು, ಆರೋಗ್ಯ ನಿರೀಕ್ಷಣಾಧಿಕಾರಿಗಳು, ಸ.ಆ.ಅಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

By suddi9

Leave a Reply

Your email address will not be published. Required fields are marked *