ಮೂಡಬಿದ್ರೆ: ಕಾರ್ಕಳ,ಸ್ವಚ್ಛ ಕಾರ್ಕಳ ಬ್ರಿಗೇಡ್ ಹಾಗೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಕಾರ್ಕಳ ಇವರ ನೇತೃತ್ವದಲ್ಲಿ ಆನೆಕೆರೆಯ ಅಮರ್ ಜವಾನ್ ಪಾರ್ಕ್‌ನಲ್ಲಿ ಕಾರ್ಗಿಲ್ ಯುದ್ಧದಲ್ಲಿ ಮಡಿದ ವೀರಯೋಧರಿಗೆ ನಮನ ಸಲ್ಲಿಸಲಾಯಿತು. ಮಾಜಿ ಸೈನಿಕರಾದ ನವನಂದ ರವರು ಎಲ್ಲರನ್ನೂ ಸ್ವಾಗತಿಸಿದರು.

ಈ ಸಂಧರ್ಭದಲ್ಲಿ ಮಾಜಿ ಸೈನಿಕರ ವೇದಿಕೆಯ ಅಧ್ಯಕ್ಷ ದೊಂಬಯ್ಯ ಶೆಟ್ಟಿಯವರು ಅಧ್ಯಕ್ಷೀಯ ನುಡಿಯನ್ನು ಆಡಿದರು. ಹಾಗೂ ಮಾಜಿ ಸೈನಿಕರಾದ ಗಿಲ್ಬರ್ಟ್ ಬ್ರಿಗಾಂಝಾರವರು ಹುತಾತ್ಮರ ಬಲಿದಾನವನ್ನು ಸ್ಮರಿಸಿಕೊಂಡು ಇಂದಿನ ಯುವಪೀಳಿಗೆ ಅಗ್ನಿಪತ್ ಯೋಜನೆಯ ಸದುಪಯೋಗ ಪಡೆದುಕೊಂಡು ಸೈನಿಕ ಜೀವನವನ್ನೊಮ್ಮೆ ನೋಡಬೇಕು ಮತ್ತು ಸೇನೆ ಜೀವನಕ್ಕೆ ಶಿಸ್ತನ್ನು ಕಲಿಸುತ್ತದೆ ಎಂದರು ಅದಲ್ಲದೆ ವಿದ್ಯಾರ್ಥಿಗಳು ಸಮಾಜಸೇವೆಯಲ್ಲಿ ಪಾಲ್ಗೊಂಡು ದೇಶವನ್ನು ಆಂತರಿಕವಾಗಿ ಭದ್ರಗೊಳಿಸಬೇಕು ಎಂದರು.

ಸ್ವಚ್ಛ ಕಾರ್ಕಳ ಬ್ರಿಗೇಡ್‌ನ ಪ್ರಕಾಶ್ ರಾವ್ ಮಾತನಾಡಿ ಸ್ವಾತಂತ್ರ್ಯದ ಅಮೃತಮಹೋತ್ಸವದ ಸಲುವಾಗಿ ಆಗಸ್ಟ್ 13 ರಿಂದ 15ರವರೆಗೆ ನಡೆಯಲಿರುವ ಹರ್ ಘರ್ ತಿರಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರತಿ ಮನೆಯಲ್ಲಿ ತಿರಂಗ ಹಾರಡಬೇಕೆಂದು ಕೇಳಿಕೊಂಡರು.

ಮಾಜಿ ಸೈನಿಕ ಹಿರಿಯಣ್ಣ ಸುವರ್ಣ ರವರು ಧನ್ಯವಾದ ಸಲ್ಲಿಸಿದರು. ಇದಾದ ನಂತರ ಹಿರಿಯ ಮಾಜಿ ಸೈನಿಕ ಸಂಕಪ್ಪ ಪೂಜಾರಿ ಯವರ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಸೈನಿಕರ ವೇದಿಕೆಯ ಸದಸ್ಯರು, ಅ.ಭಾ.ವಿ.ಪಾದ ಕಾರ್ಯಕರ್ತರು, ಹಾಗೂ ಸ್ವಚ್ಛ ಕಾರ್ಕಳ ಬ್ರಿಗೇಡ್‌ನ ಸದಸ್ಯರು ಮತ್ತು ಸ್ಥಳೀಯರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *