Published On: Sun, Jul 24th, 2022

ಮಲಬಾರ್ ಗೋಲ್ಡ್ & ಡೈಮಂಡ್ಸ್‌ನಿಂದ ಬೆಳ್ಳಿ ಪ್ರದರ್ಶನ ಮತ್ತು ಮಾರಾಟ

ಉಡುಪಿ : ವಿಶ್ವದ ಅತಿದೊಡ್ಡ ಚಿನ್ನ ಮತ್ತು ವಜ್ರದ ರೀಟೇಲ್ ಸಂಸ್ಥೆಗಳಲ್ಲಿ ಒಂದಾಗಿರುವ ಮಲಬಾರ್ ಗೋಲ್ಡ್ & ಡೈಮಂಡ್ಸ್ ಹೆಸರಾಂತ ಶೋರೂಂನಲ್ಲಿ ಹೊಚ್ಚ ಹೊಸದಾದ ಬೆಳ್ಳಿಯ ಆಭರಣದ ಪ್ರದರ್ಶನವನ್ನು ಉದ್ಘಾಟಿಸಲಾಯಿತು. ಜುಲೈ 22 ರಿಂದ 31 ರವರೆಗೆ ನಡೆಯಲಿರುವ ಈ ಪ್ರದರ್ಶನದಲ್ಲಿ ಬೆಳ್ಳಿಯ ಆಭರಣಗಳು ಮತ್ತು ಇತರೆ ಉತ್ಪನ್ನಗಳನ್ನು ಪ್ರದರ್ಶಿಸುತ್ತಿದೆ.

ಇದರ ಅನಾವರಣ ಕಾರ್ಯಕ್ರಮವನ್ನು ಮುಖ್ಯ ಅತಿಥಿಗಳಾದ ಶ್ರೀಮತಿ ನಮಿತಾ ಸತೀಶ್ಚಂದ್ರ,ಕುಮಾರಿ ವರ್ಷ ಶೆಟ್ಟಿ ಹಾಗೂ ಕುಮಾರಿ ಮೇಘ ಕಿಣಿ ನೆರವೇರಿಸಿದರು.ಶಾಖಾ ವ್ಯವಸ್ಥಾಪಕರಾದ ಪುರಂದರ ತಿಂಗಳಾಯ,ರಾಘವೇಂದ್ರ ನಾಯಕ್,ಮುಸ್ತಫಾ ಎ.ಕೆ,ವಿದ್ಯಾ ಸರಸ್ವತಿ ಸಿಬ್ಬಂದಿ ವರ್ಗದವರು ಗ್ರಾಹಕರು ಉಪಸ್ಥಿತರಿದ್ದರು.

ಮಲಬಾರ್ ಗೋಲ್ಡ್ & ಡೈಮಂಡ್ಸ್ 10 ದೇಶಗಳಲ್ಲಿ 290ಕ್ಕೂ ಹೆಚ್ಚಿನ ಮಳಿಗೆಗಳನ್ನು ಹೊಂದಿದೆ ಮಲಬಾರ್ ಗೋಲ್ಡ್ & ಡೈಮಂಡ್ಸ್ ಉಪ ಬ್ರಾಂಡ್‌ಗಳಾದ ಮೈನ್ ವಜ್ರಾಭರಣಗಳು ಎರಾ – ಅನ್‌ಕಟ್ ವಜ್ರಾಭರಣಗಳು ಡಿವೈನ್ – ಭಾರತೀಯ ಪಾರಂಪರಿಕ ಆಭರಣಗಳು , ಎತಿನಿಕ್ಸ್ – ಕರಕುಶಲ ವಿನ್ಯಾಸಿತ ಆಭರಣಗಳು, ಪ್ರಶಿಯಾ – ಅಮೂಲ್ಯ ರತ್ನಾಭರಣಗಳು , ಸ್ಟಾರ್‌ಲೆಟ್ – ಮಕ್ಕಳ ಆಭರಣಗಳು ಇವೆಲ್ಲದರ ಆಯ್ದ ಸಂಗ್ರಹಗಳನ್ನು ಶೋರೂಂಗಳಲ್ಲಿ ಪ್ರದರ್ಶಿಸಲಾಗುತ್ತದೆ . ಮಲಬಾರ್ ಗೋಲ್ಡ್ & ಡೈಮಂಡ್ಸ್ ತನ್ನ ಎಲ್ಲಾ ಆಭರಣಗಳಿಗೆ ಜೀವನಪರ್ಯಂತ ಉಚಿತ ನಿರ್ವಹಣೆ , ಒಂದು ವರ್ಷ ಉಚಿತ ವಿಮೆ ಸಂರಕ್ಷಣೆ , ಪಾರದರ್ಶಕ ಮತ್ತು ವಿವರವಾದ ದರದ ಪಟ್ಟಿ ಹಾಗು ಬೈಬ್ಯಾಕ್ ಗ್ಯಾರೆಂಟಿಯನ್ನು ಸಾದರಪಡಿಸುತ್ತಿದೆ .

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter