ಸುದ್ದಿ9ಬಂಟ್ವಾಳ: ಭಜನಾ ಸಮಾರೋಪಕ್ಕೆ ಅತಿಥಿಯಾಗಿ ಬಂದದ್ದು ನನ್ನ ಭಾಗ್ಯ ಎಂದು ದೇವದಾಸ್ ಶೆಟ್ಟಿ ಬಂಟ್ವಾಳ ಅಭಿಪ್ರಾಯಪಟ್ಟರು. ಅವರು ಶ್ರೀ ಸಿದ್ಧಿವಿನಾಯಕ ಭಜನಾ ಮಂಡಳಿ ತುಳಸೀವನ ಇದರ ಆಶ್ರಯದಲ್ಲಿ ನಡೆದ 12ನೇ ವರ್ಷದ ಭಜನಾ ಕಮ್ಮಟದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ ನನ್ನ ಈ ಬೆಳವಣಿಗೆಗೆ ಭಜನೆ ಕಾರಣ. ದೇವರನ್ನು ಒಲಿಸಲು ಸುಲಭವಾದ ಮಾರ್ಗವೆಂದರೆ ಭಜನೆ. ಮಕ್ಕಳ ಬುದ್ಧಿಶಕ್ತಿ ಮತ್ತು ಮಕ್ಕಳಲ್ಲಿ ಆತ್ಮವಿಶ್ವಾಸ ಭಜನೆಯಿಂದ ಹೆಚ್ಚುತ್ತದೆ. ಈಗಿನ ಟಿವಿ, ಇಂಟರ್ನೆಟ್ನಿಂದ ಮನೋರಂಜನೆ ಮತ್ತು ಮಾಹಿತಿ ಲಭಿಸಿದರೆ ಭಜನೆಯಿಂದ ಮನಃಶ್ಯಾಂತಿ ದೊರೆಯುತ್ತದೆ ಎಂದು ಹೇಳಿದರು.
ಈ ಕಾರ್ಯಕ್ರಮಕ್ಕೆ ಅಧ್ಯಕ್ಷರಾಗಿ ಬಂದ ವಿಠಲ ಪ್ರಭು ಗೌರವಾಧ್ಯಕ್ಷರು ಶಾರದಾಂಬಾ ಭಜನಾ ಮಂದಿರ, ಕೇಶವನಗರ, ಇವರು ಮಾತನಾಡಿ ಭಜನೆ ಮನೆಮನಗಳನ್ನು ಬೆಸೆಯುವ ಒಂದು ಸಾಧನ. ಪ್ರತಿ ಮನೆಮನೆಯಲ್ಲಿ ಭಜನೆ ಆದರೆ ಆ ಮನೆ ವಿಭಜನೆ ಎಂದಿಗೂ ಅಸಾಧ್ಯ ಎಂದು ನುಡಿದರು.
ಭಜನಾ ಕಮ್ಮಟದಲ್ಲಿ ಸುಮಾರು 7 ಭಜನಾ ಮಂಡಳಿಗಳಿಂದ 125 ಶಿಭಿರಾಥರ್ಿಗಳು ಒಂದು ದಿನದ ಭಜನಾ ಕಮ್ಮಟಕ್ಕೆ ಭಾಗವಹಿಸಿದರು. ಶ್ರೀ ವಿಠಲನಾಯಕ್ ಭಜನಾ ತರಬೇತಿ ನೀಡಿದರು. ಯೋಗಿಶ್ ನರಿಕೊಂಬು ಮತ್ತು ಪ್ರಶಾಂತ್ ನೃತ್ಯಭಜನೆ ಕಲಿಸಿದರು. ರಮೇಶ್ ಆಚಾರ್ಯ, ಪೃಥ್ವಿರಾಜ್ ಕೊ. ಮತ್ತು ಜಿತೇಶ್ ಇವರು ಜೊತೆಗೆ ಸಹಕರಿಸಿದರು. ಭಜನಾ ಮಂಡಳಿಯ ಅಧ್ಯಕ್ಷರು ಸಂಕಪ್ಪ ಮೂಲ್ಯ, ವಿಶ್ವಸ್ಥ ಮಂಡಳಿಯ ಅಧ್ಯಕ್ಷರು ವೆಂಕಟ್ರಮಣ ಬಳ್ಳಕ್ಕುರಾಯ, ಕಾರ್ಯದಶರ್ಿ ಮುರಳೀಧರ ಎನ್, ಉಮೇಶ್, ಉಪಾಧ್ಯಕ್ಷ ಕೊ. ಶಿವಪ್ಪ ಕೋಶಾಧಿಕಾರಿ ಬಿ. ಸುಧಾಕರ ರೈ ಮತ್ತಿತರರು ಭಾಗವಹಿಸಿದರು. ಕೊ.ಶಿವಪ್ಪ ಸ್ವಾಗತಿಸಿ, ಹರೀಶ್ ತುಳಸೀವನ ವಂದಿಸಿದರು.

