ಕಟ್ಟಡ ಕಾಮಗಾರಿ ಅವಘಡದಲ್ಲಿ ಮೃತಪಟ್ಟ ಅಮ್ಮುಂಜೆ ನಿವಾಸಿ ದೀಪಕ್ ಮನೆಗೆ ಶಾಸಕ ರಾಜೇಶ್ ನಾಯ್ಕ್ ಭೇಟಿ
ಕೈಕಂಬ: ಮಂಗಳೂರಿನಲ್ಲಿ ಕಟ್ಟಡ ಕಾಮಗಾರಿ ಸಂದರ್ಭದಲ್ಲಿ ಅವಘಡದಲ್ಲಿ ಮೃತಪಟ್ಟ ಅಮ್ಮುಂಜೆ ನರಂಗಬೆಟ್ಟು ನಿವಾಸಿ ದೀಪಕ್ ಇವರ ಮನೆಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಭೇಟಿ ನೀಡಿ ಸಾಂತ್ವಾನ ಹೇಳಿ, ಸರಕಾರದಿಂದ ದೊರಕುವ ಪರಿಹಾರವನ್ನು ದೀಪಕ್ ಕುಟುಂಬಕ್ಕೆ ಒದಗಿಸುವ ಭರವಸೆ ನೀಡಿ ಧೈರ್ಯ ತುಂಬಿದರು.
ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷರಾದ ವಾಮನ ಆಚಾರ್ಯ,ಪಂ. ಉಪಾಧ್ಯಕ್ಷರಾದ ಪ್ರಮೀಳ, ಪಂ. ಸದಸ್ಯರಾದ ಕಾರ್ತಿಕ್ ಬಲ್ಲಾಳ್, ರವೀಂದ್ರ ಸುವರ್ಣ ,ರೊನಾಲ್ಡ್ ಡಿಸೋಜ, ರಾಧಾಕೃಷ್ಣ ತಂತ್ರಿ, ಭಾಗೀರಥಿ, ಲೀಲಾ, ಲಕ್ಷ್ಮೀ, ಪಂ. ಅಭಿವೃದ್ಧಿ ಅಧಿಕಾರಿ ನಯನ,ಪ್ರ ಮುಖರಾದ ಕಿಶೋರ್ ಪಲ್ಲಿಪಾಡಿ, ಪ್ರಕಾಶ್ ಬಡಗಬೆಳ್ಳೂರು, ಜನಾರ್ಧನ ಬಾರಿಂಜೆ, ಸಂದೀಪ್ ಉಪಸ್ಥಿತರಿದ್ದರು.