ಬಂಟ್ವಾಳ: ತುಂಬೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ವತಿಯಿಂದ ಮಂಜೂಷಾ ಸ್ವಸಹಾಯ ಸಂಘದ ೧೬ನೇ ವಾರ್ಷಿಕೋತ್ಸವ ಕಾರ್ಯಕ್ರಮ ಒಕ್ಕೂಟದ ಅಧ್ಯಕ್ಷ ನವೀನ್ ಇವರ ಅಧ್ಯಕ್ಷತೆಯಲ್ಲಿ ಜು.18ರಂದು ಸೋಮವಾರ ನಡೆಯಿತು.
ವಲಯ ಮೇಲ್ವಿಚಾರಕಿ ಮಮತಾ ಸಂತೋಷ್ ಮಾಹಿತಿ ನೀಡಿದರು. ಪ್ರಮುಖರಾದ ವಸಂತ್ ಪಂಬದಬೆಟ್ಟು , ಸೇವಾ ಪ್ರತಿನಿಧಿ ಅನಿತಾ, ಸದಸ್ಯೆ ವಿಶಾಲಾಕ್ಷಿ, ನಾಗವೇಣಿ, ಲೀಲಾವತಿ ಇದ್ದರು.
