ಕೆಂಪುಗುಡ್ಡ ಬಳಿ ಗುಡ್ಡ ಕುಸಿತ ; ಹೆದ್ದಾರಿ ರಸ್ತೆಗೆ ಹಾನಿ
ಬಿ.ಸಿ.ರೋಡ್ : ಒಂದು ಕಡೆ ಗುಡ್ಡ ಬಿರುಕು, ಮುಂದಕ್ಕೆ ಹೋದರೆ ಗುಡ್ಡದ ಮಣ್ಣು ರಸ್ತೆಯ ಪಕ್ಕಕ್ಕೆ ಕುಸಿತ ಇನ್ನೂ ಸ್ವಲ್ಪ ಮುಂದುವರಿದರೆ ನಿರಂತರವಾಗಿ ಗುಡ್ಡದಿಂದ ಹರಿಯುತ್ತಿರುವ ಸಾಲು ಜಲಪಾತಗಳು ಇದೆಲ್ಲಾ ಕಾಣ ಸಿಗುವುದು ಬಂಟ್ವಾಳ ತಾಲೂಕಿನ ಅಮ್ಟಾಡಿ ಗ್ರಾಮದ ಕೆಂಪುಗುಡ್ಡೆಯಲ್ಲಿ.
ಬಂಟ್ವಾಳ-ಅಜೆಕಲ-ಕಲ್ಪನೆಯ ರಾಷ್ಟ್ರೀಯ ಹೆದ್ದಾರಿಯ ರಸ್ತೆಯಲ್ಲಿ ಈಗ ದೊಡ್ಡ ಗಂಡಾಂತರ ಎದುರಾಗಿದೆ. ಎತ್ತರದ ಗುಡ್ಡದ ಮದ್ಯ ಬಾಗದಲ್ಲಿ ಈ ರಸ್ತೆಯು ಹಾದು ಹೋಗಿರುತ್ತದೆ. ಎಂಟು ವರ್ಷಗಳ ಹಿಂದೆ ಈ ರಸ್ತೆ ೪ ಕೋಟಿ ರೂ ವೆಚ್ಚದಲ್ಲಿ ಅಭಿವೃದ್ದಿಯಾಗಿದ್ದು ಗುಡ್ಡದಿಂದ ಹರಿಯುತ್ತಿರುವ ನೀರು ನೇರವಾಗಿ ರಸ್ತೆಯಿಂದಲೇ ಹರಿದು ಹೋಗುತ್ತಿರುವುದರಿಂದ ರಸ್ತೆ ಸಂಪೂರ್ಣ ಹಾಳಾಗಿದೆ. ಗುಡ್ಡದಿಂದ ಬಂದ ಕೆಂಪುಮಣ್ಣು ರಸ್ತೆಯಲ್ಲೇ ಶೇಖರಗೊಂಡು ವಾಹನ ಸವಾರರಿಗೆ ತೊಂದರೆ ಉಂಟಾಗಿದೆ.
ಲೋಕೋಪಯೋಗಿ ಅಧಿಕಾರಿ ಮತ್ತು ಪಂಚಾಯತ್ ಉಪಾಧ್ಯಕ್ಷರ ಭೇಟಿ : ಕಳೆದ ಹತ್ತು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಗುಡ್ಡದ ಮಣ್ಣು ಸಡಿಲಗೊಂಡು ಗುಡ್ಡದಿಂದ ಸರಾಗವಾಗಿ ನೀರು ಹರಿಯುತ್ತಿದ್ದು ರಸ್ತೆಯ ಬದಿಯಲ್ಲೇ ಹರಿಯುತ್ತಿರುವುದರಿಂದ ಜನರಿಗೆ ತೊಂದರೆ ಆಗುತ್ತಿರುವ ನಿಟ್ಟಿನಲ್ಲಿ ಲೋಕೋಪಯಗೋಗಿ ಅಧಿಕಾರಿ ಮತ್ತು ಅಮ್ಟಾಡಿ ಪಂಚಾಯತ್ ಉಪಾಧ್ಯಕ್ಷ ಅಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮಾತ್ರವಲ್ಲದೆ, ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಮಳೆ ನಿಂತ ಕೂಡಲೆ ಸಮರ್ಪವಾದ ವ್ಯವಸ್ಥೆಯನ್ನು ಮಾಡಿಕೊಟ್ಟು ರಸ್ತೆಗೆ ತೊಂದರೆಯಾಗದಂತೆ ನೋಡಿಕೊಳ್ಳುವ ಭರವಸೆಯನ್ನೂ ನೀಡಿದರು.