ಹೈದರಾಬಾದ್: ತನ್ನ ಲವ್ವರ್ ಆಗಿರುವ ವಿರಾಟ್ ಕೊಹ್ಲಿಯ ಫ್ಲೈಯಿಂಗ್ ಕಿಸ್ ಗೆ ಅನುಷ್ಕಾ ಶೆಟ್ಟಿ ಫಿದಾ ಆಗಿರುವ ಘಟನೆ ನಿನ್ನೆ ಹೈದರಬಾದ್ ನಲ್ಲಿ ನಡೆಯಿತು. ನಿನ್ನೆ ನಡೆದ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಭಾರತ ಜಯಭೇರಿ ಭಾರಿಸಿತು. ವಿರಾಟ್ ಕೊಹ್ಲಿ ಅರ್ಧಶತಕ ಭಾರಿಸಿದ್ದೂ ಅಲ್ಲದೇ ಅತೀವೇಗದಲ್ಲಿ 6 ಸಾವಿರ ರನ್ ಪೂರೈಸಿದ ದಾಖಲೆಯನ್ನೂ ಮಾಡಿದರು.
ಅರ್ಧಶತಕ ಭಾರಿಸಿದ ಬಳಿಕ ಕೊಹ್ಲಿ ಹೆಲ್ಮೆಟ್ ತೆಗೆದು ಮುತ್ತಿಕ್ಕಿ ಸಂಭ್ರಮಿಸಿದರು. ಇದು ಎಲ್ಲಾ ಬ್ಯಾಟುಗಾರರು ಸಹಜವಾಗಿ ಮಾಡುವ ಸಂಭ್ರಮ. ಆದರೆ, ಕೊಹ್ಲಿ ಅದಾದ ಬಳಿಕ ತನ್ನ ಗರ್ಲ್ ಫ್ರೆಂಡ್ ಅನುಷ್ಕಾ ಶರ್ಮಾಳತ್ತ ಮೈದಾನದಿಂದಲೇ ಫ್ಲೈಯಿಂಗ್ ಕಿಸ್ ನೀಡಿದರು. ಗ್ಯಾಲರಿಯಲ್ಲಿ ಕುಳಿತಿದ್ದ ಅನುಷ್ಕಾ ತನ್ನ ಪ್ರಿಯಕರನ ಮುತ್ತಿನಿಂದ ರಂಗಾಗಿ ಹೋದಳು. ಎದ್ದು ನಿಂತು ಕರತಾಡನ ಮಾಡಿದಳು. ಪ್ರಿಯಕರ ಅರ್ಧಶತಕ ಗಳಿಸಿದ್ದಕ್ಕೆ ಚಪ್ಪಾಳೆ ಹೊಡೆದಳೇ..? ಅಥವಾ ಕಿಸ್ ನೀಡಿದ್ದಕ್ಕೆ ಚಪ್ಪಾಳೆ ಹೊಡೆದಳೇ..? ಎಂಬುದು ಮಾತ್ರ ಗೊತ್ತಾಗಲಿಲ್ಲ..! ಆದರೂ ಕೊಹ್ಲಿಯ ಕಿಸ್ ಗೆ ಅನುಷ್ಕಾ ಫಿದಾ ಆಗಿದ್ದಂತೂ ಸತ್ಯ.

