ಪತ್ರಿಕಾ ದಿನಾಚರಣೆ ಹಾಗೂ ರೆವರೆಂಡ್ ಹೆರ್ಮನ್ ಮ್ಯೋಗ್ಲಿಂಗ್ ಸ್ಮರಣೆ
ಮಂಗಳೂರು: ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ದ.ಕ.ಜಿಲ್ಲಾ ಸಮಿತಿಯ ವತಿಯಿಂದ ಪತ್ರಿಕಾ ದಿನಾಚರಣೆ ಹಾಗೂ ರೆವರೆಂಡ್ ಹೆರ್ಮನ್ ಮೊಗ್ಲಿಂಗ್ ಸ್ಮರಣೆ ಕಾರ್ಯಕ್ರಮವು ಮಂಗಳೂರು ಥಿಯೋಲಾಜಿಕಲ್ ಕಾಲೇಜಿನಲ್ಲಿ ನಡೆಯಿತು.
ಕನ್ನಡದ ಪ್ರಥಮ ಪತ್ರಿಕೆ ಮಂಗಳೂರ ಸಮಾಚಾರ ಪತ್ರಿಕೆಯ ಸಂಸ್ಥಾಪಕ ಸಂಪಾದಕ ರೆ.ಹೆರ್ಮನ್ ಮೋಗ್ಲಿಂಗ್ ಅವರ ಪ್ರತಿಮೆಗೆ ಮಾಜಿ ಶಾಸಕ ಜೆ.ಆರ್.ಲೊಬೋ ಅವರು ಮಾಲಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಜೆ.ಆರ್.ಲೋಬೋ ಅವರು, ಕನ್ನಡದ ಪ್ರಥಮ ಪತ್ರಿಕೆ ಹುಟ್ಟು ಹಾಕಿದ ಹೆರ್ಮನ್ ಮೊಗ್ಲಿಂಗ್ ಅವರ ಸ್ಮರಣೆ ನಡೆಸುವುದು ಅತ್ಯಂತ ಸ್ತುತ್ಯಾರ್ಹ ಕಾರ್ಯಕ್ರಮವಾಗಿದೆ. ಪತ್ರಿಕಾ ಲೋಕ ಹಾಗೂ ಕನ್ನಡ ಸಾಹಿತ್ಯ , ದಾಸ ಸಾಹಿತ್ಯ ಕ್ಕೆ ಮೊಗ್ಲಿಂಗ್ ಅವರ ಕೊಡುಗೆ ಅಪಾರವಾಗಿದೆ. ಈ ವಿಚಾರವನ್ನು ನಾವು ಮುಂದಿನ ಪೀಳಿಗೆಗೆ ತಿಳಿಸುವ ಕಾರ್ಯಕ್ರಮ ನಡೆಯಬೇಕಾಗಿದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಾಟಕ ಥಿಯೋಲಾಜಿಕಲ್ ಕಾಲೇಜು ಪ್ರಾಂಶುಪಾಲ ವಂ.ಡಾ.ಎಚ್.ಎಂ.ವಾಟ್ಸನ್ ಅವರು ಮಾತನಾಡಿ, ನಿಘಂಟು ಕರ್ತ ಕಿಟೆಲ್ ಅವರ ರೀತಿಯಲ್ಲೇ ಹರ್ಮನ್ ಮೊಗ್ಲಿಂಗ್ ಅವರ ಪ್ರತಿಮೆಯನ್ನು ಕರ್ನಾಟಕದ ಹಲವೆಡೆ ಪ್ರತಿಷ್ಠಾಪಿಸಬೇಕೆಂದು ಹೇಳಿದರು. ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ದ.ಕ.ಜಿಲ್ಲಾ ಸಮಿತಿ ಅಧ್ಯಕ್ಷ ಹರೀಶ್ ಬಂಟ್ವಾಳ್ ಪತ್ರಿಕಾ ದಿನಾಚರಣೆಯ ಶುಭಕೋರಿ ಮಾತನಾಡಿದರು.
ಸಂಘದ ಪ್ರಧಾನ ಕಾರ್ಯದರ್ಶಿ ತಾರಾನಾಥ್ ಗಟ್ಟಿ ಕಾಪಿಕಾಡ್ ಸ್ವಾಗತಿಸಿದರು.ಕಾರ್ಯಕ್ರಮದಲ್ಲಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಉಪಾಧ್ಯಕ್ಷ ಲಕ್ಷ್ಮಣ್ ಕುಂದರ್ ಪದಾಧಿಕಾರಿಗಳಾದ ಕೆನ್ಯೂಟ್ ಪಿಂಟೊ , ಗಿರಿಧರ್ ಶೆಟ್ಟಿ , ಹಿರಿಯ ಪತ್ರಕರ್ತ ಮೋಹನ್ ಬೋಳಂಗಡಿ ,ರಿಚ್ಚಿ ಲಸ್ರಾದೋ , ಹಮೀದ್ ವಿಟ್ಲ ,ಈಶ್ವರ ವಾರಣಾಶಿ, ರಮೇಶ್ ನೀರಬಿದಿರೆ, ಸುಳ್ಯ ತಾಲೂಕು ಸಮಿತಿಯ ಅಧ್ಯಕ್ಷ ಜೆ.ಕೆ. ರೈ, ಶಿವಪ್ರಸಾದ್ ಆಲೆಟ್ಟಿ, ಶಿವರಾಮ ಕಜೆಮೂಲೆ, ಶ್ರೀಧರ್ ಕಜೆಗದ್ದೆ, ರಮೇಶ ನೀರಬಿದಿರೆ, ಜಯಶ್ರೀ ಕೊಯಿಂಗೋಡಿ, ಕೀರ್ತಿ ಹೊದ್ದೆಟ್ಟಿ ಮೊದಲಾದವರು ಉಪಸ್ಥಿತರಿದ್ದರು .