ಎಂ.ಸಿ.ಸಿ ಬ್ಯಾಂಕಿನ ವೃತ್ತಿಪರ ನಿರ್ದೇಶಕರಾಗಿ ಯುವ ವಕೀಲರಾದ ಎ.ಪಿ.ಮೊಂತೆರೋ ಮತ್ತು ಸುಶಾಂತ್ ಸಲ್ದಾನ ಸಹಿತ ಮೂವರು ನೇಮಕ
ಮಂಗಳೂರು : ಯುವ ವಕೀಲರಾದ ಎ.ಪಿ ಮೊಂತೆರೋ ರವರು ಪ್ರಸ್ತುತ ವಕೀಲ ವೃತ್ತಿ ಯಲ್ಲಿ ತೊಡಗಿಸಿಕೊಂಡಿದ್ದು,ಕ್ರಿಶ್ಚಿಯನ್ ವಿವಾಹ ನೊಂದಾಣಾಧಿಕಾರಿಯಾಗಿ, ದ.ಕ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಯಾಗಿ,ದ.ಕ ಜಿಲ್ಲಾ ಕಾರ್ಮಿಕ ಘಟಕದ ಕಾನೂನು ಸಲಹೆಗಾರರಾಗಿ ಕೆಥೋಲಿಕ್ ಸಭಾ ವಿಟ್ಲ ವಲಯದ ಕಾರ್ಯದರ್ಶಿ ಯಾಗಿ, ಲಯನ್ಸ್ ಕ್ಲಬ್ ವಿಟ್ಲ ಇದರ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಯುವ ವಕೀಲರಾದ ಸುಶಾಂತ್ ಸಲ್ದಾನ ರವರು ಕ್ರಿಶ್ಚಿಯನ್ ವಿವಾಹ ನೋಂದವಣಾಧಿಕಾರಿಯಾಗಿದ್ದು ವಕೀಲ ವೃತ್ತಿ ಯಲ್ಲಿ ತೊಡಗಿಸಿಕೊಂಡಿರುತ್ತಾರೆ. ಮತ್ತು ಸಿ.ಜೆ ಪಿಂಟೋ, ಶರ್ಮಿಳಾ ಮಿನೇಜಸ್ ಪೆಲಿಕ್ಸ್ ಡಿ ಕ್ರೂಜ್ ರವರನ್ನೂ ನಿರ್ದೇಶಕರು ಗಳಾಗಿ ನೇಮಕ ಗೊಳಿಸಲಾಗಿದೆ.