ವಿಶ್ವಹಿಂದೂ ಪರಿಷತ್ ಭಜರಂಗದಳ ಗುರುಪುರ ಕೈಕಂಬದಲ್ಲಿ ಪ್ರತಿಭಟನೆ
ಕೈಕಂಬ: ರಾಜಸ್ಥಾನದಲ್ಲಿ ಗ್ರಾಹಕರ ಸೋಗಿನಲ್ಲಿ ಬಂದು ಟೈಲರ್ ಕನ್ನಯ ಲಾಲ್ ಎಂಬವರನ್ನು ಐಸಿಸ್ ರೀತಿಯಲ್ಲಿ ಕೊಂದು ಶಿರಚ್ಛೇದ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ ಮಾಡಿದ ಮತಾಂಧ ಕಿರಾತಕರ ಈ ಹತ್ಯೆಯನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್ ಭಜರಂಗದಳ ಗುರುಪುರ ಪ್ರಖಂಡದ ನೇತೃತ್ವದಲ್ಲಿ ಜೂ.30ರಂದು ಗುರುವಾರ ಗುರುಪುರ ಕೈಕಂಬ ಜಂಕ್ಷನಲ್ಲಿ ಪ್ರತಿಭಟನೆ ಹಾಗೂ ಖಂಡನಾ ಸಭೆ ನಡೆಯಿತು.
ಕಾರ್ಯಕ್ರಮದಲ್ಲಿ ವಿಹಿಂಪ ಮಂಗಳೂರು ವಿಭಾಗ ಸಹಕಾರ್ಯದರ್ಶಿ ದೇವಿಪ್ರಸ ಶೆಟ್ಟಿ. ಜಿಲ್ಲಾ ವಿಹಿಂಪ ಸಹಕಾರ್ಯದರ್ಶಿ ವಸಂತ್ ಸುವರ್ಣ, ಜಿಲ್ಲಾ ವಿಹಿಂಪ ಸತ್ಸಂಗ ಪ್ರಮುಖ್ ಕೃಷ್ಣ ಕಜೆಪದವು, ಜಿಲ್ಲಾ ಭಜರಂಗದಳ ಸಂಯೋಜಕ್ ಪುನಿತ್ ಅತ್ತಾವರ, ಜಿಲ್ಲಾ ಭಜರಂಗದಳ ಸಹಸಂಯೋಜಕ್ ನವೀನ್ ಮೂಡುಶೆಡ್ಡೆ, ಜಿಲ್ಲಾ ಮಾತೃಶಕ್ತಿ ಪ್ರಮುಖ್ ಸುಜಾತ ಕಂದಾವರ, ಪ್ರಖಂಡ ವಿಹಿಂಪ ಅಧ್ಯಕ್ಷರಾದ ವಿಷ್ಣು ಕಾಮತ್ ಗುರುಪುರ, ಕಾರ್ಯದರ್ಶಿ ಸುನೀಲ್ ಪೆರರ, ಸಹಕಾರ್ಯದರ್ಶಿ ದಿನೇಶ್ ಮಿಜಾರ್, ಭಜರಂಗದಳ ಪ್ರಖಂಡ ಸಂಯೋಜಕ್ ರಾಜೇಶ್ ಗಂಜಿಮಠ, ಗೋರಕ್ಷ ಪ್ರಮುಖ್ ಹರೀಶ್ ಎಡಪದವು, ಅಖಡ ಪ್ರಮುಖ್ ರಾಜು ಕಾಜಿಲ, ಹಾಗೂ ಘಟಕಗಳ ಪ್ರಮುಖರು ಮತ್ತು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.