Published On: Thu, Jun 30th, 2022

ಶುಭದಾ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿನಿಯರಿಂದ ಭತ್ತದ ನಾಟಿ

ಮುಂಬಯಿ : ಕುಂದಾಪುರ ಇಲ್ಲಿನ ಕಿರಿಮಂಜೇಶ್ವರದ ಶುಭದಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿನಿಯರು ಹೆರಂಜಾಲು ಇಲ್ಲಿನ ನ ಪ್ರಗತಿಪರ ಕೃಷಿಕರಾದ ಗಣಪ ದೇವಾಡಿಗ ಇವರ ಕೃಷಿ ಭೂಮಿಯಲ್ಲಿ ಸ್ವಯಂಪ್ರೇರಿತರಾಗಿ ತುಂತುರು ಮಳೆಯಲ್ಲಿ ಸ್ವತಃ ಭತ್ತದ ಪೈರುಗಳನ್ನು ನಾಟಿ ಮಾಡಿದರು.news_image

ಸಾಮಾನ್ಯ ನಾಟಿ ಪದ್ಧತಿಗೆ ಕೂಲಿಯಾಳುಗಳ ಕೊರತೆ ಇರುವ ಸನ್ನಿವೇಶದಲ್ಲಿ ವಿದ್ಯಾರ್ಥಿಗಳು ಕೃಷಿಯಲ್ಲಿ ಆಸಕ್ತಿ ತೋರುತ್ತಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಅದೇ ರೀತಿ ಕೃಷಿಭೂಮಿಯ ಮಾಲಕರಿಂದ ಭತ್ತದ ನೇಜಿ ಹಾಗೂ ಕೃಷಿ ಚಟುವಟಿಕೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆದರು.

ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿ ಸದಸ್ಯ ಆರ್.ಕೆ ಬಿಲ್ಲವ,ಮುಖ್ಯ ಶಿಕ್ಷಕಿ ವಿದ್ಯಾ ಶೆಟ್ಟಿ, ಶಿಕ್ಷಕಿಯರಾದ ರೋಸಮ್ಮ, ಗಾಯತ್ರಿ, ಪ್ರೀತಮ್ ಶೆಟ್ಟಿ, ಅನಿತಾ ಮತ್ತು ಬೋಧಕೇತರ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter