ಮುಂಬಯಿ: ಶಿವಸೇನೆ,ಕಾಂಗ್ರೆಸ್ ಮತ್ತು ಎನ್ ಸಿ ಪಿ ಮೈತ್ರಿ ಸರಕಾರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅಧಿಕೃತವಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ.
2019ರಲ್ಲಿ ಸಿ ಎಂ ಸ್ಥಾನ ಅಲಂಕರಿಸಿಕೊಂಡ ಠಾಕ್ರೆ ತಮ್ಮ ಎರಡೂವರೆ ವರ್ಷದ ಆಡಳಿತಕ್ಕೆ ರಾಜೀನಾಮೆ ನೀಡಿದ್ದಾರೆ.ಏಕನಾಥ್ ಶಿಂಧೆ ಹಾಗೂ ತಮ್ಮ 40ಕ್ಕೂ ಹೆಚ್ಚಿನ ಶಾಸಕರ ಬಲದಿಂದ ಸರಕಾರವನ್ನು ಉರುಳಿಸುವಲ್ಲಿ ಸಫಲರಾಗಿದ್ದಾರೆ. ಠಾಕ್ರೆ ಬಹುಮತ ಸಾಬೀತುಪಡಿಸಲು ಸುಪ್ರೀಂ ಕೋರ್ಟ್ ಆದೇಶಿಸಿತ್ತು ಆದರೆ ಠಾಕ್ರೆಯವರು ಫೇಸ್‌ಬುಕ್ ಲೈವ್ ಮೂಲಕ ರಾಜೀನಾಮೆ ನೀಡಿದ್ದಾರೆ.

