ಸ್ವೀಝಲ್ ಫುರ್ಟಾಡೊ-ಸೂಪರ್ ಮಾಡೆಲ್ ಇಂಡಿಯಾ ೨೦೨೨ ರನ್ನರ್ ಅಪ್
ಮುಂಬಯಿ : ಕರ್ನಾಟಕದ ಉಡುಪಿ ಜಿಲ್ಲೆಯ ಬಾರಕೂರು ಮೂಲದ ಸ್ವೀಝಲ್ ಫುರ್ಟಾಡೊ ಅವರು ಸೂಪರ್ ಮಾಡೆಲ್ ಇಂಡಿಯಾ ೨೦೨೨ರ ರನ್ನರ್ ಅಪ್ ಆಗಿ ಆಯ್ಕೆ ಗೊಂಡಿದ್ದಾರೆ.
ಸ್ಟಾರ್ ಎಂಟರ್‌ಟೈನ್ಮೆಂಟ್ ಪ್ರೊಡಕ್ಷನ್ ಇವರು ಜೂ.೨೬ರಂದು ಭಾನುವಾರ ನವದೆಹಲಿಯ ಲೀಲಾ ಪ್ಯಾಲೇಸ್‌ನಲ್ಲಿ ನಡೆಸಿದ ಸ್ಪರ್ಧೆಯಲ್ಲಿ ರೋಹಿತ್ ಖಂಡೆಲ್ ವಾಲ (ಮಿಸ್ಟರ್ ವರ್ಲ್ಡ್ ೨೦೧೬) ಮತ್ತು ಸುಮನ್ ರಾವ್ (ಮಿಸ್ ವರ್ಲ್ಡ್ ಏಷಿಯಾ ಎರಡನೇ ರನ್ನರ್ ಅಪ್) ಹಾಗೂ ಆಡ್ಲೈನ್ ಕ್ಯಾಸ್ಟೊಲಿನ್ (ಮಿಸ್ ಯುನಿವರ್ಸ್ ಮೂರನೇ ರನ್ನರ್ ಅಪ್) ಇವರು ತೀರ್ಪುಗಾರರಾಗಿ ವಿಜೇತರನ್ನು ಆಯ್ಕೆ ಮಾಡಿದ್ದರು.
ಈಕೆ ೨೦೨೧ ಬೆಂಗಳೂರಿನಲ್ಲಿ ನಡೆದ ಇಗ್ನೆಂಟ್ ಇಂಡಿಯಾ ಮೆರಾಕ್ಕಿ ಫ್ಯಾಶನ್ ಸ್ಪರ್ಧೆಯ ಆರು ಜನ ವಿಜೇತರಲ್ಲಿ ಸ್ವೀಝಲ್ ಕೂಡ ಒಬ್ಬರಾಗಿದ್ದು, “ಫ್ರೆಶ್ ಫೇಸ್ ಆಫ್ ಇಗ್ನೆಂಟ್ ಇಂಡಿಯಾ ೨೦೨೧”ರ ಜೈಪುರ್ ನಲ್ಲಿ ನಡೆದ “ಸ್ಟಾರ್ ಮಿಸ್ ಟೀನ್ ಇಂಡಿಯಾ ಕಿರೀಟವನ್ನು ಕೂಡಾ ಮುಡಿಗೇರಿಸಿಕೊಂಡಿದ್ದರು. ಫೆಬ್ರವರಿ ೨೦೨೨ ಜೈಪುರ್ ನಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ “ಕ್ವೀನ್ ಆಫ್ ಕಾಸ್ಮೋಸ್ ೨೦೨೨”ರ ಸ್ಪರ್ಧೆಯಲ್ಲಿ ಫೈನಲ್ ಹಂತವನ್ನು ತಲುಪಿದ್ದರು.
ಬಾರಕೂರು ಸವಿತಾ ಫುರ್ಟಾಡೊ ಅವರ ಸುಪುತ್ರಿಯಾದ ಈಕೆ ಪ್ರಸ್ತುತ ಬೆಂಗಳೂರಿನ ಮೌಂಟ್ ಕಾರ್ಮೆಲ್ ಪಿಯು ಕಾಲೇಜ್‌ನಲ್ಲಿ ವಿದ್ಯಾಭ್ಯಾಸ ಪಡೆಯುತ್ತಿರುವ ಸ್ವೀಝಲ್ ಬಾಲ್ಯದಿಂದಲೂ ಫ್ಯಾಶನ್ ಮತ್ತು ಮಾಡೆಲಿಂಗ್ ನಲ್ಲಿ ಆಸಕ್ತಿಯನ್ನು ಹೊಂದಿದ್ದು ೨೦೧೭ರಲ್ಲಿ “ದಕ್ಷಿಣ ಭಾರತದ ಸೂಪರ್ ಮಾಡೆಲ್” ಮಕ್ಕಳ ವಿಭಾಗದಲ್ಲಿ ಕೂಡಾ ಪ್ರಶಸ್ತಿಯನ್ನು ಪಡೆದಿರುತ್ತಾಳೆ.