ಯರ್ಲಪಾಡಿಯಲ್ಲಿ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಉಪಕೇಂದ್ರ ಉದ್ಘಾಟನೆ
ಕಾರ್ಕಳ: ಕರ್ನಾಟಕ ಸರಕಾರದ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಇದರ ಯರ್ಲಪಾಡಿ ಉಪಕೇಂದ್ರವು ಇಂದು ಯರ್ಲಪಾಡಿ ಗ್ರಾಮಪಂಚಾಯತ್ ಬಳಿ ಉದ್ಘಾಟನೆಗೊಂಡಿತು.
ಉದ್ಗಾಟನೆಯನ್ನು ಯರ್ಲಪಾಡಿ ಗ್ರಾಮಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಪ್ರಮೀಳಾ ಪೂಜಾರಿ ಹಾಗೂ ಬೈಲೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈಧ್ಯಾಧಿಕಾರಿಗಳಾದ ಡಾ. ಮಹಂತ್ ಹೆಗ್ಡೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಯರ್ಲಪಾಡಿ ಗ್ರಾಮದ ಸಮುದಾಯ ಆರೋಗ್ಯಾಧಿಕಾರಿ ಶ್ರೀಮತಿ ಅರುಂಧತಿ ನಾಯಕ್, ಗ್ರಾಮಪಂಚಾಯತ್ ಉಪಾಧ್ಯಕ್ಷರಾದ ಸುನೀಲ್ ಹೆಗ್ಡೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರಾದ ಪ್ರತಾಪ್ ಚಂದ್ರ ಶೆಟ್ಟಿ, ಗ್ರಾಮಪಂಚಾಯತ್ ಸದಸ್ಯರು, ಸ್ಥಳೀಯರಾದ ಸಂತೋಷ್ ಅಮೀನ್, ಮುಸ್ತಾಫ್ ಜಾರ್ಕಳ, ಪ್ರೇಮ್ ಕುಮಾರ್, ಬೇರೆ ಬೇರೆ ಗ್ರಾಮಗಳ ಆರೋಗ್ಯ ಮತ್ತು ಕ್ಷೇಮಕೇಂದ್ರಗಳ ಸಮುದಾಯ ಆರೋಗ್ಯಾಧಿಕಾರಿಗಳು, ಗ್ರಾಮದ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಪಂಚಾಯತ್ ಸಿಬ್ಬಂದಿಗಳು, SLRM ಕಾರ್ಯಕರ್ತೆಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.