ಜೂ.23ರಂದು ಗಿಡ ನೆಡುವ ಕಾರ್ಯಕ್ರಮ”ಗಿಡ ಬೆಳೆಸಿ ಪರಿಸರ ಉಳಿಸಿ”
ಕೈಕಂಬ: ತೆಂಕಎಡಪದವು ಗ್ರಾಮದ ನೆಲ್ಲಿಜೋರ ಎಂಬಲ್ಲಿ ಜೂ23ರಂದು ಗುರುವಾರ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬ್ರಿಂಡೇಲ್ ಶಾಲಾ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರಿಯುತ ಬಾಲಕೃಷ್ಣ ನಾಯಕ್, ಕುಪ್ಪೆಪದವಿನ ಶ್ರೀಯುತ ಅಜಿತ್ ಕುಮಾರ್ ಜೈನ್, ಶ್ರೀಯುತ ಜನಾರ್ಧನ ಕುಲಾಲ್, ಬ್ರಿಂಡೇಲ್‌ನ ಅಂಗಡಿಯ ಉದ್ಯಮಿ ಮಾಧವ ನಾಯಕ್, ಕೌಸ್ತುಭ ಅಂಗಡಿಯ ಮಾಲೀಕರಾದ ಸುದರ್ಶನ ಪ್ರಭು ಹಾಗೂ ನೆಲ್ಲಿಜೋರದ ನಿವೃತ್ತ ಬ್ಯಾಂಕ್ ಉದ್ಯೋಗಿ ಟಿ. ದಿನೇಶ್ ರಾವ್ ಮತ್ತು ಅವರ ಧರ್ಮ ಪತ್ನಿ ಸತ್ಯಭಾಮ ದಿನೇಶ್ ರವರು ನೆರವೇರಿಸಿದರು.