ಉಜಿರೆ ರುಡ್‌ಸೆಟ್‌ನಿಂದ ರಾಜ್ಯ ಮಟ್ಟದ ಸ್ವಉದ್ಯಮ ನಿರ್ವಹಣಾ ತರಬೇತಿ ಶಿಬಿರ ವೃತ್ತಿನಿಷ್ಠೆಯಿಂದ ಮಾತ್ರ ಪ್ರತಿಷ್ಠಿತ ಬದುಕು ಸಾಧ್ಯ : ಡಾ| ಶಿವರಾಮ ಭಂಡಾರಿ
ಉಜಿರೆ : ವೃತ್ತಿನಿಷ್ಠೆಯಿಂದ ಮಾತ್ರ ಪ್ರತಿಷ್ಠಿತ ಬದುಕು ಸಾಧ್ಯವಾಗುತ್ತದೆ. ಕುಲವೃತ್ತಿ ಅನ್ನುವುದು ಪೂರ್ವಜರು ರೂಪಿಸಿದ ಕಟ್ಟುಪಾಡು ಆಗಿದೆ. ಇದನ್ನು ಮುನ್ನಡೆಸಲು ಹಿಂಜರಿಕೆ ಸಲ್ಲದು. ಎಲ್ಲಾ ವೃತ್ತಿಗಳೂ ಮೌಲಿಕವಾಗಿದ್ದು ಪ್ರತಿಷ್ಠತೆವುಳ್ಳದ್ದೇ ಆಗಿವೆ. ಆದರೆ ಅದನ್ನು ನಾವು ಯಾವರೀತಿ ಪ್ರಾಮಾಣಿಕವಾಗಿ ಮತ್ತು ಕಿಟಿಬದ್ಧರಾಗಿ ನಿರ್ವಹಿಸಿ ಮುನ್ನಡೆಸುತ್ತೇವೆ ಅನ್ನುವುದು ಮುಖ್ಯವಾಗಿದೆ. ಪರಿಶ್ರಮದಿಂದ ಸಾಧಿಸಿದ ಎಲ್ಲಾ ವೃತ್ತಿಗಳು ಯಶಸ್ಸಿನ ಗುಟ್ಟಾಗಿದ್ದು ಅವಾಗಲೇ ಕುಲವೃತ್ತಿಗಳು ಪರಂಪರಗತವಾಗಿ ಮುನ್ನಡೆಸಲು ಸಾಧ್ಯವಾಗುವುದು. ಪೂಜ್ಯ ಖಾವಂದರರ ಶುಭಾನುಗ್ರಹದಿಂದ ಇಂತಹ ಅವಕಾಶಗಳು ನನ್ನ ಪಾಲಿಗೆ ಒದಗಿದ್ದು ನನ್ನ ಭಾಗ್ಯವಾಗಿದೆ ಎಂದು ಗುಲಾಬಿ ಕೃಷ್ಣ ಭಂಡಾರಿ ಚಾರಿಟೇಬಲ್ ಟ್ರಸ್ಟ್ (ರಿ.) ಇದರ ಸಂಸ್ಥಾಪಕ, ಅಧ್ಯಕ್ಷ್ಯ ಡಾ| ಶಿವರಾಮ ಕೆ.ಭಂಡಾರಿ ತಿಳಿಸಿದರು.
ಡಾ| ಡಿ.ವೀರೇಂದ್ರ ಹೆಗ್ಗಡೆ ಅವರ ಸಾರಥ್ಯದೊಂದಿಗೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯ ಸಂಚಾಲಕತ್ವ ಹಾಗೂ ಕೆನರಾ ಬ್ಯಾಂಕ್ ಇವುಗಳ ಪ್ರಾಯೋಜಕತ್ವದಲ್ಲಿ ಸೇವಾನಿರತ ಸಂಸ್ಥೆ ಉಜಿರೆ ಇಲ್ಲಿನ ರುಡ್‌ಸೆಟ್ ಸಭಾಗೃಹದಲ್ಲಿ ಗುಲಾಬಿ ಕೃಷ್ಣ ಭಂಡಾರಿ ಚಾರಿಟೇಬಲ್ ಟ್ರಸ್ಟ್ನ ಅಧೀನದಲ್ಲಿ ಆಯೋಜಿಸಿದ್ದ ದ್ವಿದಿನಗಳ ರಾಜ್ಯ ಮಟ್ಟದ ಕೇಶವಿನ್ಯಾಸ (ಸ್ವಉದ್ಯೋಗ ನಿರ್ವಹಣಾ) ತರಬೇತಿ ಶಿಬಿರಕ್ಕೆ ಚಾಲನೆಯನ್ನಿತ್ತು ಡಾ| ಭಂಡಾರಿ ಮಾತನಾಡಿದರು.
ಗುಲಾಬಿ ಕೃಷ್ಣ ಭಂಡಾರಿ ಚಾರಿಟೇಬಲ್ ಟ್ರಸ್ಟ್ ನ ಅಧೀನದಲ್ಲಿ ದ್ವಿದಿನಗಳ ಶಿವರಾಮ ಭಂಡಾರಿ ಅವರು ಸೆಲೇಬ್ರ‍್ರಿಟೀ ಕೇಶವಿನ್ಯಾಸದ ಸುಧಾರಿತ ವಿಧಾನಗಳು ಮತ್ತು ತಲೆಕೂದಲುಗಳ ಸಜ್ಜು ಗೊಳಿಸುವಿಕೆಯ ಬಗ್ಗೆ ತರಬೇತಿ ನೀಡಿ ಪ್ರಸ್ತುತ ಕೇಶ ವೃತ್ತೀಯ ಅವಿಷ್ಕಾರದ ಬಗ್ಗೆ ಮಾಹಿತಿ ನೀಡಿ ಆಧುನಿಕ ಮುಖಭಾವದ ಅಲಂಕರಣ, ಲಾವಣ್ಯತೆ, ಕೂದಲುಗಳ ವರ್ಣತೆ, ಉಗುರುಗಳ ಹೊಳಪು ಮಾಡುವ ವಿಧಾನಗಳ ಬಗ್ಗೆ ಪ್ರಾಯೋಗಿಕವಾಗಿ ಆಳವಾದ ಮಾಹಿತಿ ನೀಡಿದರು.
ಶಿವಾಸ್ ಪರಿವಾರದ ಶ್ವೇತಾ ಆರ್.ಭಂಡಾರಿ (ಜಿಕೆಬಿಸಿ ಟ್ರಸ್ಟ್ನ ವಿಶ್ವಸ್ಥ ಸದಸ್ಯೆ), ಕು| ಮಲಿಸಾ ಡಿಕೋಸ್ಟಾ, ಕು| ಬಿಲಾಲ್ ಸಲ್ಮಾನಿ,ಲಕ್ಷ್ಮೀ ರೈ ವೇದಿಕೆಯಲ್ಲಿ ಆಸೀನರಾಗಿದ್ದು, ಸ್ಮೀತಾ ಎಸ್.ಭಂಡಾರಿ, ಶ್ರುತಿ ಖನ್‌ಡೈತ್, ಹೇಮಂತ್ ಶರ್ಮ, ಗಣೇಶ್ ಶರ್ಮ ಉಪಸ್ಥಿತರಿದ್ದು ಶಿಬಿರವನ್ನು ನಡೆಸಿಕೊಟ್ಟರು.
ರುಡ್‌ಸೆಟ್‌ನ ಕಾರ್ಯನಿರ್ವಹಣಾ ನಿರ್ದೇಶಕ ಗಿರಿಧರ ಕಲ್ಲಾಪುರ, ರುಡ್‌ಸೆಟ್ ನಿರ್ದೇಶಕ ಎಂ.ಸುರೇಶ್, ಹಿರಿಯ ಉಪನ್ಯಾಸಕರಾದ ಅಬ್ರಹಾಂ ಜೇಮ್ಸ್ ವೇದಿಕೆಯಲ್ಲಿದ್ದರು. ಕೃಷ್ಣಪ್ಪ ಪೂಜಾರಿ, ಮಾಧವಿ ರೈ, ಕಾಶ್ಮೀರ್ ಎಲ್.ಡಿಸೋಜಾ, ರವಿ ಪ್ರಕಾಶ್, ರಶ್ಮೀ ಚಾರ್ಮಾಡಿ, ಪ್ರವೀಣ್ ಕುಮಾರ್, ಸುರೇಶ್ ಗೌಡ ಸೇರಿದಂತೆ ಅನೇಕರು ಉಪಸ್ಥಿತರಿದ್ದು ಸಹಕರಿಸಿದರು.ಹಿರಿಯ ಉಪನ್ಯಾಸಕಿ ಅನುಸೂಯ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಎಂ.ಸುರೇಶ್ ಅತಿಥಿಗಳಿಗೆ ಪುಷ್ಫಗುಪ್ಚಗಳನ್ನೀಡಿ ಗೌರವಿಸಿದರು. ಅಬ್ರಹಾಂ ಜೇಮ್ಸ್ ವಂದನಾರ್ಪಣೆಗೈದರು.