ಅಜ್ಜಿಬೆಟ್ಟುವಿನಲ್ಲಿ ನಿರ್ಮಾಣಗೊಳ್ಳುತ್ತಿರುವ ವೇಣೂರಿಗೆ ಸಂಪರ್ಕಿಸುವ ಸೇತುವೆ ಶಾಸಕ ರಾಜೇಶ್ ನಾಯ್ಕ್ ಪರಿಶೀಲನೆ
ಬಂಟ್ವಾಳ: ವಾಮದಪದವು ಅಜ್ಜಿಬೆಟ್ಟುವಿನಲ್ಲಿ ನಿರ್ಮಾಣಗೊಳ್ಳುತ್ತಿರುವ ವೇಣೂರಿಗೆ ಸಂಪರ್ಕ ಕಲ್ಪಿಸುವ ರೂ 5.50 ಕೋಟಿ ಅನುದಾನದ ಸೇತುವೆ ಸಹಿತ ಕಿಂಡಿ ಅಣೆಕಟ್ಟು ಕಾಮಗಾರಿಯ ಪ್ರಗತಿಯನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಶ್ಯಾಂಪ್ರಸಾದ್ ಪೂಂಜಾ,ಪುರುಷೋತ್ತಮ ಶೆಟ್ಟಿ ವಾಮದಪದವು, ಬೇಬಿ ಗೌಡ, ಉಮೇಶ್ ಶೆಟ್ಟಿ, ಮಹಾಲಿಂಗ ಶರ್ಮ, ತಿಲಕ್, ರವಿರಾಮ ಶೆಟ್ಟಿ ಮತ್ತು ಸ್ಥಳೀಯರು ಉಪಸ್ಥಿತರಿದ್ದರು.