ಅಮ್ಟಾಡಿ: ತ್ಯಾಜ್ಯ ಎಸೆದವರಿಂದಲೇ ತೆರವುಗೊಳಿಸಿದ ಅಧಿಕಾರಿ
ಬಂಟ್ವಾಳ: ಇಲ್ಲಿನ ಅಮ್ಟಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುರಿಯಾಳ ಪಡು ಎಂಬಲ್ಲಿ ಪುದು ಗ್ರಾಮ ಪಂಚಾಯಿತಿನ ತ್ಯಾಜ್ಯ ಡಂಪಿAಗ್ ಮಾಡಿರುವುದು ತಿಳಿದು ಅವರಿಂದಲೇ ತೆರವುಗೊಳಿಸಿ ದಂಡ ವಿಧಿಸಿದ ಘಟನೆ ಶುಕ್ರವಾರ ನಡೆದಿದೆ.
ಇಲ್ಲಿನ ಕುರಿಯಾಳ ಪಡು ಎಂಬಲ್ಲಿ ಗುರುವಾರ ರಾತ್ರಿ ಯಾರೋ ವಾಹನದಲ್ಲಿ ಬಂದು ತ್ಯಾಜ್ಯ ರಾಶಿ ಡಂಪಿಂಗ್ ಮಾಡಿ ಪರಾರಿಯಾಗಿರುವ ಬಗ್ಗೆ ಸ್ಥಳೀಯರು ದೂರು ಸಲ್ಲಿಸಿದ್ದರು. ಈ ಬಗ್ಗೆ ಪಿಡಿಒ ರವಿ ಅವರು ಸಿಬ್ಬಂದಿ ಚೇತನ್ ಎಂಬವರನ್ನು ಅಲ್ಲಿಗೆ ಕಳುಹಿಸಿ ಪರಿಶೀಲಿಸಿದಾಗ ಫರಂಗಿಪೇಟೆ ಬಾರಿನ ಬಿಲ್ಲು ಪತ್ತೆಯಾಗಿದೆ. ಇದೇ ವೇಳೆ ಪುದು ಗ್ರಾಮ ಪಂಚಾಯಿತಿ ಅಧಿಕಾರಿಗಳನ್ನು ಸಂಪರ್ಕಿಸಿ ಇಲ್ಲಿನ ಕಸ ವಿಲೇವಾರಿ ಗುತ್ತಿಗೆ ವಹಿಸಿಕೊಂಡ ವ್ಯಕ್ತಿಯನ್ನು ಕರೆಸಿ ಅವರಿಗೆ ರೂ ೫ಸಾವಿರ ದಂಡ ವಿಧಿಸಿ ತ್ಯಾಜ್ಯ ತೆರವುಗೊಳಿಸಿ ಗಮನ ಸೆಳೆದಿದ್ದಾರೆ.