ಶೆಹಬಾಜ್ ಷರೀಫ್, ಇಮ್ರಾನ್ ಖಾನ್‍ಗಿಂತ ಅವರ ಪತ್ನಿಯರೇ ಹೆಚ್ಚು ಶ್ರೀಮಂತರು
ಇಸ್ಲಾಮಾಬಾದ್: ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಇಮ್ರಾನ್ ಖಾನ್ ಅವರ ಪತ್ನಿಯರು ತಮ್ಮ ಪತಿಗಿಂತ ಶ್ರೀಮಂತರಾಗಿದ್ದಾರೆ.
ಪಾಕಿಸ್ತಾನದ ಚುನಾವಣಾ ಆಯೋಗಕ್ಕೆ 2020ರ ಜೂನ್ 30ಕ್ಕೆ ಕೊನೆಗೊಳ್ಳುವ ಹಣಕಾಸು ವರ್ಷಕ್ಕೆ ಸಲ್ಲಿಸಿದ ಆಸ್ತಿ ವಿವರದಲ್ಲಿ ಶೆಹಬಾಜ್ ಷರೀಫ್ ಮತ್ತು ಇಮ್ರಾನ್ ಖಾನ್ ಅವರ ಪತ್ನಿಯರು ತಮ್ಮ ಪತಿಗಿಂತ ಶ್ರೀಮಂತರು ಎಂಬುದು ತಿಳಿದುಬಂದಿದೆ.
ಪ್ರಕಟಣೆ ವಿವರದಲ್ಲಿ, ಮಾಜಿ ಪ್ರಧಾನಿ ಇಮ್ರಾನ್ ಖಾನ್ ಪಿಕೆಆರ್ 2,00,000 (75,182 ರೂಪಾಯಿ) ಮೌಲ್ಯದ ನಾಲ್ಕು ಮೇಕೆಗಳನ್ನು ಹೊಂದಿದ್ದಾರೆ. ಅವರು ಆರು ಚಿರ ಮತ್ತು ಪಿತ್ರಾರ್ಜಿತ ಆಸ್ತಿಯನ್ನು ಹೊಂದಿದ್ದಾರೆ. ಇಮ್ರಾನ್ ಖಾನ್ ಅವರು ದೇಶದ ಹೊರಗೆ ಯಾವುದೇ ರೀತಿಯ ವಾಹನ ಅಥವಾ ಆಸ್ತಿಯನ್ನು ಹೊಂದಿಲ್ಲ. ಅವರು ಯಾವುದೇ ಹೂಡಿಕೆಯನ್ನು ಮಾಡಿಲ್ಲ.
ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್(ಪಿಟಿಐ) ಅಧ್ಯಕ್ಷನಾಗಿರುವ ಇಮ್ರಾನ್ ಅವರು ಪಾಕಿಸ್ತಾನಿ ವಿದೇಶಿ ಕರೆನ್ಸಿ ಖಾತೆಗಳಲ್ಲಿ 3,29,196 ಡಾಲರ್ (2.57 ಕೋಟಿ ರೂ.) ಮತ್ತು 518-ಪೌಂಡ್ ಸ್ಟರ್ಲಿಂಗ್ (49,116 ರೂ.) ಹೊರತುಪಡಿಸಿ, ಬ್ಯಾಂಕ್ ಖಾತೆಗಳಲ್ಲಿ 2.25 ಕೋಟಿ ರೂ.ಗಿಂತಲೂ ಹೆಚ್ಚು ಹಣ ಹೊಂದಿದ್ದಾರೆ. ಆದರೆ ಇಮ್ರಾನ್ ಖಾನ್ ಅವರ ಪತ್ನಿ ಬುಶ್ರಾ ಬೀಬಿ ಅವರ ನಿವ್ವಳ ಮೌಲ್ಯವು ಪಿಕೆಆರ್ 142.11 ಮಿಲಿಯನ್ (1,108 ಕೋಟಿ ರೂ.) ಆಗಿದೆ. ಆಕೆ ನಾಲ್ಕು ಆಸ್ತಿಗಳನ್ನು ಹೊಂದಿದ್ದಾರೆ.
ಪ್ರಧಾನಿ ಶೆಹಬಾಜ್ ಷರೀಫ್ ಅವರ ಮೊದಲ ಪತ್ನಿ ನುಸ್ರತ್ ಶೆಹಬಾಜ್ ಕೂಡ ತಮ್ಮ ಪತಿಗಿಂತ ಶ್ರೀಮಂತರಾಗಿದ್ದಾರೆ. ಅವರು ಪಿಕೆಆರ್ 230.29 ಮಿಲಿಯನ್ (1,795 ಕೋಟಿ ರೂ.) ಮೌಲ್ಯದ ಸಂಪತ್ತನ್ನು ಹೊಂದಿದ್ದಾರೆ. ಲಾಹೋರ್ ಮತ್ತು ಹಜಾರಾ ವಿಭಾಗಗಳಲ್ಲಿ ಒಂಬತ್ತು ಕೃಷಿ ಆಸ್ತಿ ಮತ್ತು ತಲಾ ಒಂದು ಮನೆ ಹೊಂದಿದ್ದಾರೆ. ಅವರು ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಹೂಡಿಕೆಗಳನ್ನು ಮಾಡಿದ್ದಾರೆ. ಆಕೆಯ ಪತಿ ಪಿಕೆಆರ್ 104.21 ಮಿಲಿಯನ್ (812 ಕೋಟಿ ರೂ.) ಮೌಲ್ಯದ ಸಂಪತ್ತನ್ನು ಹೊಂದಿದ್ದಾರೆ.