ಬಂಟ್ವಾಳ: ಕೊಳ್ನಾಡು ಗ್ರಾ.ಪಂ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇವರ ಸಹಯೋಗದೊಂದಿಗೆ ಪಾಣಾಜೆಕೋಡಿ ಎಂಬಲ್ಲಿ ನೂತನವಾಗಿ ನಿರ್ಮಾಣವಾದ ಅಂಗನವಾಡಿ ಕಟ್ಟಡವನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಉದ್ಘಾಟಿಸಿದರು.WhatsApp Image 2022-06-13 at 3.22.40 PM

ಬಳಿಕ ಮಾತನಾಡಿದ ಅವರು, ಮಕ್ಕಳಿಗೆ ಬಾಲ್ಯದ ಪೂರ್ವ ಪ್ರಥಮ ಶಿಕ್ಷಣದ ಜೊತೆ ದೈಹಿಕ ಮಾನಸಿಕ ಆರೋಗ್ಯ ರಕ್ಷಣೆಯ ದೃಷ್ಟಿಯಿಂದ ಸರಕಾರ ಅಂಗನವಾಡಿ ಮೂಲಕ ಹಲವಾರು ಯೋಜನೆ ಗಳನ್ನು ಜಾರಿಮಾಡಿದ್ದು,ಗ್ರಾಮೀಣ ಭಾಗದ ಪ್ರತಿ ಮಕ್ಕಳು ಇದರ ಪ್ರಯೋಜನ ಪಡೆಯಲು ಸಾಧ್ಯ ಎಂದು ಅವರು ತಿಳಿಸಿದರು.WhatsApp Image 2022-06-13 at 3.22.39 PM (2)

ಅಂಗನವಾಡಿಯಲ್ಲಿ ಶಿಕ್ಷಣ ಪಡೆಯುವ ಪ್ರತಿ ಮಕ್ಕಳ ಬಗ್ಗೆ ಮನೆಯ ಮಕ್ಕಳ ರೀತಿಯಲ್ಲಿ ನಿಗಾವಹಿಸಬೇಕು ಎಂದು ಅವರು ಇಲಾಖೆಯವರಿಗೆ ಸೂಚಿಸಿದರು. ಪ್ರತಿ ಗ್ರಾಮವು ರಾಮರಾಜ್ಯವಾಗಬೇಕು ಎಂಬ ಉದ್ದೇಶದಿಂದ ಉದ್ಯೋಗ ಖಾತರಿ ಯೋಜನೆಯ ಲ್ಲಿ ಅನುಮಾನಗಳನ್ನು ಒದಗಿಸುತ್ತಿದ್ದು, ಗ್ರಾಮದ ಅಭಿವೃದ್ಧಿ ಯಲ್ಲಿ ಗ್ರಾಮದ ಜನರ ಸಹಕಾರ ಜೊತೆಯಿರಲಿ ಎಂದು ಶುಭ ಹಾರೈಸಿದರು.WhatsApp Image 2022-06-13 at 3.22.40 PM (2)

ಕೊಳ್ನಾಡು ಗ್ರಾ.ಪಂ. ಅಧ್ಯಕ್ಷೆ ನೇಬಿಸಾ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸದಸ್ಯರಾದ ಕಿಶೋರ್ ದೇವಾಡಿಗ, ಮಹಮ್ಮದ್ ಮಂಚಿ, ಲವೀನಾ, ವಸಂತಿ, ರಾಜಾರಾಮ್ ಹೆಗ್ಡೆ, ಲೋಹಿತ್, ಪ್ರಶಾಂತ್ , ಜಯಂತಿ ಎಸ್.ಪೂಜಾರಿ, ವಿಟ್ಲ ಸಿ.ಡಿ.ಪಿ.ಒ ಉಷಾ, ಗುತ್ತಿಗೆದಾರ ಸೀತಾರಾಮ ಶೆಟ್ಟಿ ಉಪಸ್ಥಿತರಿದ್ದರು. ಉಪಾಧ್ಯಕ್ಷ ಶುಭಾಶ್ವಂಧ್ರ ಶೆಟ್ಟಿ,ಪ್ರಸ್ತಾವಿಕವಾಗಿ ಮಾತನಾಡಿದರು. ಪಿ.ಡಿ.ಒ ರೋಹಿಣಿ ಬಿ ಸ್ವಾಗತಿಸಿದರು. ಮೇಲ್ವಿಚಾರಕಿ ಲೋಲಾಕ್ಷಿ ಕಾರ್ಯಕ್ರಮ ನಿರೂಪಿಸಿದರು.WhatsApp Image 2022-06-13 at 3.22.40 PM (1) WhatsApp Image 2022-06-13 at 3.22.39 PM WhatsApp Image 2022-06-13 at 3.22.39 PM (2)

By Suddi9

Leave a Reply

Your email address will not be published. Required fields are marked *