ಬಂಟ್ವಾಳ: ತಾಲ್ಲೂಕಿನ ಮಾಣಿ ಗ್ರಾಮ ಪಂಚಾಯಿತಿ ಕಟ್ಟಡ ಬಳಿ ಪಾಣೆಮಂಗಳೂರು ಫಿರ್ಕಾ ಬೀಡಿ ಎಂಡ್ ಜನರಲ್ ವರ್ಕರ್ಸ್ ಯೂನಿಯನ್ (ಎಐಟಿಯುಸಿ) ವತಿಯಿಂದ ಜೂ.11ರಂದು ಶನಿವಾರ ಆರಂಭಗೊಂಡ ವಲಯ ಕಚೇರಿಗೆ ಬೀಡಿ ಗುತ್ತಿಗೆದಾರ ಬಿ.ಶೇಖರ ಕುಲಾಲ್ ಪಲ್ಲಾಜೆ ಪಲಿಕೆ ಚಾಲನೆ ನೀಡಿದರು. ಪ್ರಮುಖರಾದ ವಿ.ಕುಕ್ಯಾನ್, ಕುಶಾಲಪ್ಪ ಗೌಡ ಪೆರಾಜೆ, ವಿ.ಎಸ್.ಬೇರಿಂಜ, ಬಿ.ಶೇಖರ್, ಸುರೇಶ ಕುಮಾರ್, ಎಂ.ಕರುಣಾಕರ ಮತ್ತಿತರರು ಇದ್ದರು. 
