ಮುಂಬಯಿ : ಮಂಗಳೂರು ಮೂಡುಶೆಡ್ಡೆ ಅಲ್ಲಿನ ಹೊಸಲಕ್ಕೆ ಶ್ರೀ ದುರ್ಗಾ ಪರಮೇಶ್ವರಿ ಕೃಪಾ ನಿವಾಸಿ, ಮಣೆಲ್ ತೊಟ್ಲಂಜ ದಿ| ಸಂಜೀವ ಶೆಟ್ಟಿ ಇವರ ಧರ್ಮಪತ್ನಿ ದೇವಕಿ ಎಸ್.ಶೆಟ್ಟಿ (೮೮.)ಜೂ.09ರಂದು ಗುರುವಾರ ಬೆಳಿಗ್ಗೆ ವಯೋವೃದ್ಧ ಸಹಜತೆಯಿಂದ ನಿಧನರಾದರು.
ಥಾಣೆ ಭಿವಂಡಿಯಲ್ಲಿನ ಹೆಸರಾಂತ ಹೊಟೇಲು ಉದ್ಯಮಿ, ಬಂಟರ ಸಂಘ ಮುಂಬಯಿ ಇದರ ಭಿವಂಡಿ ಪ್ರಾದೇಶಿಕ ಸಮಿತಿಯ ಮಾಜಿ ಕಾರ್ಯಧ್ಯಕ್ಷ, ಥಾಣೆ ಕಲ್ಯಾಣ್ ಇಲ್ಲಿನ ಶಹಾಡ್ ಪೂರ್ವದ ಶ್ರೀ ನಿತ್ಯಾನಂದ ಮಿತ್ರ ಭಜನ ಮಂಡಳಿ ಸಂಚಾಲಕತ್ವ ಶ್ರೀ ಮೂಕಾಂಬಿಕ ದೇವಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷ (ಟ್ರಸ್ಟೀ) ಮೂಡುಶೆಡ್ಡೆ ವಿಶ್ವನಾಥ ಎಸ್.ಶೆಟ್ಟಿ, ಉದ್ಯಮಿಗಳಾದ ಕರುಣಾಕರ್ ಎಸ್.ಶೆಟ್ಟಿ, ದಿನೇಶ್ ಎಸ್.ಶೆಟ್ಟಿ ಹಾಗೂ ಮಂಗಳೂರು ವಕೀಲ ನ್ಯಾ| ಉಮೇಶ್ ಶೆಟ್ಟಿ ಸೇರಿದಂತೆ ನಾಲ್ವರು ಸುಪುತ್ರರು, ಕನ್ನಡ ಸೇವಾ ಸಂಘ ಪೊವಾಯಿ ಇದರ ಮಾಜಿ ಮಹಿಳಾ ವಿಭಾಗಧ್ಯಕ್ಷೆ ಸವಿತಾ ಕೆ.ಶೆಟ್ಟಿ (ಸೊಸೆ) ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
