ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಬ್ರಹ್ಮರಕೂಟ್ಲು ರಾಷ್ಟ್ರೀಯ ಹೆದ್ದಾರಿ ಬಳಿ ಗದ್ದೆಯಲ್ಲಿ ‘ತುಳುನಾಡ್ ಕೃಷಿ ಕ್ರಾಂತಿ’ ಕಾರ್ಯಕ್ರಮ ನಡೆಸಿ ಸಾವಯವ ಮತ್ತು ಯಾಂತ್ರೀಕೃತ ಭತ್ತ ನಾಟಿ ಪದ್ಧತಿ ಪರಿಚಯಿಸಲು ಸ್ಥಳೀಯ ಜುಮಾದಿಗುಡ್ಡೆ ಹಿಂದೂ ಸೇವಾ ಸಮಿತಿ ಸಿದ್ಧತೆ ನಡೆಸಿದೆ.
ಬ್ರಹ್ಮರಕೂಟ್ಲು: 23ರಂದು ‘ತುಳುನಾಡ್ಡ್ ಕೃಷಿ ಕ್ರಾಂತಿ’ ಕಾರ್ಯಕ್ರಮ
ಐದೂವರೆ ಎಕರೆಯಲ್ಲಿ ಭತ್ತ ನಾಟಿಗೆ ಸಿದ್ಧತೆ
ಜುಮಾದಿಗುಡ್ಡೆ ಹಿಂದೂ ಸೇವಾ ಸಂಘದ ವತಿಯಿಂದ ಬ್ರಹ್ಮರಕೂಟ್ಲು ರಾಷ್ಟ್ರೀಯ ಹೆದ್ದಾರಿ ಬ್ರಹ್ಮಸನ್ನಿಧಿ ಬಳಿ ಐದೂವರೆ ಎಕರೆ ವಿಸ್ತೀರ್ಣ ಹೊಂದಿರುವ ವಿಶಾಲವಾದ ಗದ್ದೆಯಲ್ಲಿ ಇದೇ 23ರಂದು ‘ತುಳುನಾಡ್ಡ್ ಕೃಷಿ ಕ್ರಾಂತಿ’ ಎಂಬ ಹೆಸರಿನಲ್ಲಿ ‘ಸಾವಯವ ಮತ್ತು ಯಾಂತ್ರೀಕೃತ ಭತ್ತ ನಾಟಿ ಪದ್ಧತಿ’ಯನ್ನು ಪರಿಚಯಿಸುವ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಪ್ರಗತಿಪರ ಕೃಷಿಕ ಬಿಜೆಪಿ ಮುಖಂಡ ಉಳಿಪಾಡಿಗುತ್ತು ರಾಜೇಶ ನಾಯ್ಕ್ ಹೇಳಿದ್ದಾರೆ.
ಬಿ.ಸಿ.ರೋಡ್ನಲ್ಲಿ ಗುರುವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಈ ಬಗ್ಗೆ ಮಾಹಿತಿ ನೀಡಿದರು.

ಆಧುನಿಕತೆ ಸೆಳೆತಕ್ಕೆ ಸಿಲುಕಿರುವ ಯುವಜನತೆ ತುಳುನಾಡಿನ ಸಾಂಪ್ರದಾಯಿಕ ಕೃಷಿ ಮತ್ತು ಆರೋಗ್ಯಪೂರ್ಣ ಕ್ರೀಡೆಗೆ ಒತ್ತು ನೀಡುವಂತೆ ಪ್ರೇರೇಪಿಸುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಈ ಕಾರ್ಯಕ್ರಮ ವಿವಿಧ ಸಂಘ ಸಂಸ್ಥೆಗಳ ಸಹಕಾರದಲ್ಲಿ ಮುಂದುವರಿಯಲಿದೆ ಎಂದರು.
ಜಿಲ್ಲೆಯಲ್ಲಿ ಈಗಾಗಲೇ ಸುಮಾರು 40ಸಾವಿರಕ್ಕೂ ಮಿಕ್ಕಿ ಹೆಕ್ಟೇರ್ ಜಮೀನು ಭತ್ತ ನಾಟಿಯಾಗದೆ ಬರಡು ಭೂಮಿಯಾಗಿ ಮಾರ್ಪಟಿದ್ದು, ಇದನ್ನು ಹಂತ ಹಂತವಾಗಿ ಸ್ಥಳೀಯರ ಸಾಮೂಹಿಕ ಶ್ರಮ ಬಳಸಿಕೊಂಡು ಭತ್ತ ನಾಟಿಗೆ ಉತ್ತೇಜನ ನೀಡಲಾಗುತ್ತದೆ.
‘ತುಳುನಾಡ್ಡ್ ಕೃಷಿ ಕ್ರಾಂತಿ’ ಕಾರ್ಯಕ್ರಮದಲ್ಲಿ ಭತ್ತ ನಾಟಿ ಪ್ರಾತ್ಯಕ್ಷಿಕೆ ಮತ್ತು ವಿದ್ಯಾಥರ್ಿಗಳಿಗೆ ಪ್ರತ್ಯೇಕ ಮಾಹಿತಿ ಪುಸ್ತಕ ಸಹಿತ ಕಿಟ್ ವಿತರಿಸಲಾಗುವುದು.
ಇಲ್ಲಿನ ಐದೂವರೆ ಎಕರೆ ವಿಸ್ತೀರ್ಣದ ಗದ್ದೆಯಲ್ಲಿ ‘ಬಿಳಿ ಜಯ ತಳಿ’ಯ ಒಟ್ಟು 150ಕ್ಕೂ ಮಿಕ್ಕಿ ಅಕ್ಕಿಮುಡಿ ಬೆಳೆಸಲಾಗುತ್ತಿದ್ದು, ಗದ್ದೆ ಬದಿ ಹೆಸರು, ಉದ್ದು, ಜೋಳ ಬೆಳೆಯುವ ಪ್ರಯತ್ನವೂ ಸಾಗಿದೆ ಎಂದು ಅವರು ವಿವರಿಸಿದರು.
ಈ ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸಲಿದ್ದು, ಆರ್ಎಸ್ಎಸ್ ಮುಖಂಡ ಡಾ.ಕೆ.ಪ್ರಭಾಕರ ಭಟ್ ಅಧ್ಯಕ್ಷತೆ ವಹಿಸುವರು. ಅಂದು ನಡೆಯುವ ‘ಕೆಸರ್ಡ್ ಒಂಜಿ ದಿನ’ ತುಳುನಾಡಿನ ಗ್ರಾಮೀಣ ಕ್ರೀಡೆಯನ್ನು ಸಂಸದ ನಳಿನ್ ಕುಮಾರ್ ಕಟೀಲು ಉದ್ಘಾಟಿಸುವರು. ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಸಂಸದೆ ಶೋಭಾ ಕರಂದ್ಲಾಜೆ, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಕ್ಯಾಪ್ಟನ್ ಗಣೇಶ ಕಾಣರ್ಿಕ್ ಮತ್ತಿತರ ಗಣ್ಯರು ಭಾಗವಹಿಸುವರು ಎಂದು ತಿಳಿಸಿದರು.
